ಮುಂಬೈ: ಬಿಜೆಪಿ ಶಾಸಕ ಆಶಿಷ್ ಶೆಲಾರ್ ಅವರ ಆಪ್ತ ಸಹಾಯಕ ಎಂದು ಹೇಳಿ ಕೈದಿಗಳ ಸಂಬಂಧಿಕರನ್ನು ವಂಚಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ.
ಬಾಂದ್ರಾ ಪೊಲೀಸರು ಈ ವಿಚಾರ ತಿಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಬಂಧಿತನನ್ನು ಅಮಿನ್ ಇರ್ಫಾನ್ ಬೇಂದ್ರೇಕರ್ ಎಂದು ಗುರುತಿಸಲಾಗಿದೆ. ಈತ ವಕೀಲರನ್ನು ಸಂಪರ್ಕಿಸಿ, ಅವರ ಕಕ್ಷೀದಾರರ ಮಾಹಿತಿ ಪಡೆಯುತ್ತಿದ್ದ. ಬಳಿಕ ಅವರಿಗೆ, ಸರ್ಕಾರದಿಂದ ನೆರವು ಒದಗಿಸುವುದು ನಂಬಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಉಲ್ಲೇಖಿಸಿದೆ.
ಹೆಚ್ಚಿನ ಮಾಹಿತಿಗಾಗಿ ತನಿಖೆ ಪ್ರಗತಿಯಲ್ಲಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.