ನವದೆಹಲಿ: ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಮುಂದಿನ ಪ್ರಧಾನಿ ಆಗಬೇಕೆಂಬುದನ್ನು ಇಡೀ ದೇಶ ಬಯಸುತ್ತಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ವಿವಾದದ ಬೆನ್ನಲ್ಲೇ ಸಿಸೋಡಿಯಾ ಈ ಹೇಳಿಕೆ ನೀಡಿದ್ದಾರೆ. ಕೇಜ್ರಿವಾಲ್ ಪ್ರಧಾನಿ ಆಗಬೇಕೆಂಬುದು ವ್ಯಕ್ತಿಯೊಬ್ಬನ ಮಹತ್ವಾಕಾಂಕ್ಷೆಯಲ್ಲ. ಅದನ್ನು ಇಡೀ ದೇಶವೇ ಬಯಸುತ್ತಿದೆ ಎಂದು ತಿಳಿಸಿದ್ದಾರೆ.

‘ಏಕ್ ಮೌಕಾ ಕೇಜ್ರಿವಾಲ್ ಕೋ’ (ಕೇಜ್ರಿವಾಲ್‌ಗೆ ಒಂದು ಅವಕಾಶ) ಎಂಬ ವಿಚಾರವು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಸಿಸೋಡಿಯಾ ‘ಪಿಟಿಐ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘2024 ರಲ್ಲಿ ಮೋದಿಗೆ ಪರ್ಯಾಯವಾಗಿ ಕೇಜ್ರಿವಾಲ್ ಅವರನ್ನು ಜನರು ನೋಡುತ್ತಿದ್ದಾರೆ. ಏಕೆಂದರೆ, ಅವರು ಆರೋಗ್ಯ, ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಮಾತನಾಡುತ್ತಾರೆ’ ಎಂದು ತಿಳಿಸಿದ್ದಾರೆ.

‘ಬಿಜೆಪಿ, ಸಿಬಿಐ, ಲೆಫ್ಟಿನೆಂಟ್ ಗವರ್ನರ್ ಮತ್ತು ದೆಹಲಿ ಮುಖ್ಯ ಕಾರ್ಯದರ್ಶಿ, ಎಲ್ಲರೂ ಕೇಜ್ರಿವಾಲ್ ಅವರನ್ನು ತಡೆಯುವ ಉದ್ದೇಶ ಹೊಂದಿದ್ದಾರೆ. ಇಲ್ಲದಿದ್ದರೆ, 2024 (ಲೋಕಸಭಾ ಚುನಾವಣೆ) ಅವರ (ಬಿಜೆಪಿ) ಕೈಯಿಂದ ತಪ್ಪಿಹೋಗಲಿದೆ’ ಎಂದು ಹೇಳಿದ್ದಾರೆ.

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಸಿಸೋಡಿಯಾ ಅವರ ಮನೆ ಸೇರಿದಂತೆ 31 ಸ್ಥಳಗಳ ಮೇಲೆ ದಾಳಿ ನಡೆಸಿದೆ.

ಇವುಗಳನ್ನೂ ಓದಿ

ದೆಹಲಿ ಅಬಕಾರಿ ಹಗರಣ: ಸಿಬಿಐ ಎಫ್ಐಆರ್ನಲ್ಲಿ ಏನಿದೆ?

2024ರ ಲೋಕಸಭಾ ಚುನಾವಣೆ ಕೇಜ್ರಿವಾಲ್–ಮೋದಿ ನಡುವಿನ ಯುದ್ಧ: ಸಿಸೋಡಿಯಾ

ಸಿಬಿಐ ದಾಳಿ ನಡೆದ ಬೆನ್ನಲ್ಲೇ ದೆಹಲಿ ಸರ್ಕಾರದಿಂದ 12 ಐಎಎಸ್ ಅಧಿಕಾರಿಗಳ ವರ್ಗಾವಣೆ

ತಪ್ಪು ಮಾಡಿಲ್ಲ, ದಾಳಿಯಿಂದ ಭೀತಿಗೊಂಡಿಲ್ಲ: ಮನೀಶ್ ಸಿಸೋಡಿಯಾ

ಸಿಸೋಡಿಯಾ ಮನೆ ಮೇಲೆ ಸಿಬಿಐ ದಾಳಿ; 'ಎಎಪಿ ಸಾಧನೆಯೇ ಶೋಧಕ್ಕೆ ಕಾರಣ' ಎಂದು ಟೀಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.