ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮಾಡುವುದು ಕಡ್ಡಾಯ ಎನ್ನುವುದು ಸಂವಿಧಾನದಲ್ಲಿಲ್ಲ. ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಅಧಿಕಾರ ಇಲ್ಲ ಎಂದು ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಚುನಾವಣಾ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿ ಅವರು ಮಾತನಾಡಿದರು.
.ಎಸ್ಐಆರ್ | ತಮಿಳುನಾಡು, ಪ.ಬಂಗಾಳ ಆರೋಪ ರಾಜಕೀಯ ಪ್ರೇರಿತ: ಕೇಂದ್ರ ಚುನಾವಣಾ ಆಯೋಗ.
1950ರ ಜನಪ್ರತಿನಿಧಿಗಳ ಕಾಯ್ದೆಯ ಅನ್ವಯ ಚುನಾವಣಾ ಆಯೋಗಕ್ಕೆ ಎಸ್ಐಆರ್ ನಡೆಸುವ ಹಕ್ಕು ಇಲ್ಲ ಎಂದು ತಿವಾರಿ ಹೇಳಿದರು. ತಮ್ಮ ವಾದಕ್ಕೆ ಕಾಯ್ದೆಯ ಸೆಕ್ಷನ್ 21ಅನ್ನು ಉಲ್ಲೇಖಿಸಿದರು.

ಮತದಾರರ ಪಟ್ಟಿಯಲ್ಲಿ ಏನಾದರೂ ದೋಷಗಳಿದ್ದರೆ ಎಸ್ಐಆರ್ ನಡೆಸುವುದು ಚುನಾವಣಾ ಆಯೋಗ ಇರುವ ಆಯ್ಕೆಯಷ್ಟೇ. ಆದರೆ ಅದಕ್ಕೆ ಕಾರಣಗಳನ್ನು ನೀಡಬೇಕು. ರಾಜ್ಯಗಳಲ್ಲಿ ಎಸ್ಐಆರ್ ನಡೆಸಲು ಚುನಾವಣಾ ಆಯೋಗ ಕಾರಣಗಳನ್ನು ಬಹಿರಂಗ ಪಡಿಸಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲದೆ ಎಸ್ಐಆರ್ ನಡೆಸಿದ ಬಳಿಕ ಯಂತ್ರದ ಮೂಲಕ ಓದುವ ಪಟ್ಟಿಯನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ.
.SIR ಸಿಬ್ಬಂದಿ ಸುರಕ್ಷತೆ ಖಚಿತಪಡಿಸಿ: ಬಂಗಾಳ DGPಗೆ ಚುನಾವಣಾ ಆಯೋಗ ನಿರ್ದೇಶನ.
ಭಾಷಣದಲ್ಲಿ ಇವಿಎಂ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಇವಿಎಂಗಳ ಸೋರ್ಸ್ ಕೋಡ್ ಯಾರ ಬಳಿ ಇದೆ? ಕಂಪನಿ ಬಳಿ ಇದೆಯೋ ಅಥವಾ ಚುನಾವಣಾ ಆಯೋಗದ ಬಳಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಬ್ಯಾಲೆಟ್ ಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಚುನಾವಣೆಗಿಂತ ಮೊದಲು ನೇರ ನಗದು ವರ್ಗಾವಣೆಯನ್ನು ನಿಲ್ಲಿಸಬೇಕು ಎಂದು ತಿವಾರಿ ಆಗ್ರಹಿಸಿದ್ದಾರೆ. ಬಿಹಾರ ಚುನಾವಣೆಗೂ ಮುನ್ನ ಹಣ ವರ್ಗಾಯಿಸಲು ಎನ್ಡಿಎಗೆ ಅವಕಾಶ ನೀಡಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ.
.ಎಸ್ಐಆರ್ ಚರ್ಚೆಗೆ ಒಪ್ಪಿಗೆ: ಸ್ಪೀಕರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.