ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್‌ ಕೀ ಬಾತ್‌ @100: ಪ್ರಧಾನಿ ಮೋದಿಯವರ ಪ್ರಮುಖ 10 ಹೇಳಿಕೆಗಳು

100ನೇ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಟಾಪ್‌–10 ಹೇಳಿಕೆಗಳು ಇಲ್ಲಿವೆ.
Published 30 ಏಪ್ರಿಲ್ 2023, 10:59 IST
Last Updated 30 ಏಪ್ರಿಲ್ 2023, 10:59 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್‌ ಕೀ ಬಾತ್‌‘ ರೆಡಿಯೊ ಕಾರ್ಯಕ್ರಮ ಇಂದು ನೂರು ಸಂಚಿಕೆ ಪೂರ್ಣಗೊಳಿಸಿದೆ. ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲೂ ಕೂಡ 100ನೇ ಸಂಚಿಕೆ ಪ್ರಸಾರಗೊಂಡಿದೆ. ಹೀಗಾಗಿ ಇದನ್ನು ಐತಿಹಾಸಿಕ ಎಂದು ಸರ್ಕಾರ ಬಣ್ಣಿಸಿದೆ.

100ನೇ ಮನ್‌ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರ ಟಾಪ್‌–10 ಹೇಳಿಕೆಗಳು ಇಲ್ಲಿವೆ.

ಮನ್‌ ಕೀ ಬಾತ್‌ ಕಾರ್ಯಕ್ರಮವು ದೇಶದ ಜನರ ಒಳ್ಳೆಯ ಹಾಗೂ ಸಕಾರಾತ್ಮಕ ಅಂಶಗಳಿರುವ ವಿಭಿನ್ನ ಹಬ್ಬವಾಗಿದೆ. ಪ್ರತೀ ತಿಂಗಳು ಬರುವ ಈ ಹಬ್ಬಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿರುತ್ತಾರೆ. ನಾವು ಇದರ ರಚನಾತ್ಮಕತೆಯನ್ನು ಸಂಭ್ರಮಿಸತ್ತೇವೆ. ಜನರ ಪಾಲ್ಗೊಳ್ಳುವಿಕೆಯನ್ನೂ ನಾವು ಸಂಭ್ರಮಿಸುತ್ತೇವೆ.

  1. ಮನ್‌ ಕೀ ಬಾತ್‌ ಖಂಡಿತವಾಗಿಯೂ ಕೋಟ್ಯಾಂತರ ಭಾರತೀಯರ ಮನದ ಮಾತಾಗಿದೆ. ಇದು ಅವರ ಭಾವನೆಗಳ ತೋರ್ಪಡಿಸುವಿಕೆಯಾಗಿದೆ.

  2. 2014ರ ಅಕ್ಟೋಬರ್‌ 3 ವಿಜಯದಶಮಿಯ ದಿನದಂದು ನಾವೆಲ್ಲಾ ಒಟ್ಟು ಸೇರಿ ಮನ್‌ ಕೀ ಬಾತ್‌ನ ಪಯಣವನ್ನು ಆರಂಭಿಸಿದೆವು. ವಿಜಯ ದಶಮಿ ಕೆಟ್ಟದರ ವಿರುದ್ಧದ ಒಳ್ಳೆಯದರ ವಿಜಯದ ಹಬ್ಬ. ಮನ್‌ಕೀ ಬಾತ್‌ ಕೂಡ ರಚನಾತ್ಮಕರೆ ಹಾಗೂ ಒಳ್ಳೆತನದ ಹಬ್ಬವಾಗಿದೆ.

  3. ಬೇಟಿ ಬಚಾವೋ ಬೇಟಿ ಪಡಾವೋ ಕಾರ್ಯಕ್ರಮವಾಗಿರಲಿ ಅಥವಾ ಸ್ವಚ್ಛ ಭಾರತ ಕಾರ್ಯಕ್ರಮವಾಗಿರಲಿ ಅಥವಾ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವೇ ಅಗಿರಲಿ ಎಲ್ಲ ವಿಷಯವೂ ಮನ್‌ ಕೀ ಬಾತ್‌ನೊಂದಿಗೆ ಸಂಬಂಧ ಹೊಂದಿದೆ. ಇದೊಂದು ಬೃಹತ್ ಚಳವಳಿಯಾಗಿದ್ದು, ನೀವು ಅದನ್ನು ಹಾಗೆ (ಚಳವಳಿ) ಮಾಡಿದ್ದೀರಿ.

  4. ನನಗೆ ಮನ್ ಕೀ ಬಾತ್‌ ಎನ್ನುವುದು ಕಾರ್ಯಕ್ರಮವಲ್ಲ. ಅದು ನನಗೆ ವಿಶ್ವಾಸ, ಆರಾಧಾನೆ ಹಾಗೂ ವ್ರತ ಇದ್ದ ಹಾಗೆ. ಜನರು ದೇವರ ಪೂಜೆಗೆ ಹೋಗುವಾಗ ಅವರು ಪ್ರಸಾದವನ್ನು ತರುತ್ತಾರೆ. ನನಗೆ ಮನ್‌ ಕೀ ಬಾತ್‌ ಎನ್ನುವುದು ಜನತಾ ಜನಾರ್ಧನರ ರೂಪದಲ್ಲಿ ಇರುವ ದೇವರ ಪ್ರಸಾದ. ಮನ್‌ ಕೀ ಬಾತ್‌ ಎನ್ನುವುದು ನನ್ನ ಆಧ್ಯಾತ್ಮ ಪ್ರಯಾಣದ ಭಾಗ.

  5. ವಿದೇಶ ಪ್ರವಾಸಕ್ಕೆ ಹೋಗುವುದಕ್ಕಿಂತ ಮುಂಚೆ, ದೇಶದ ಇತರೆ ರಾಜ್ಯಗಳ 15 ಸ್ಥಳಗಳಿಗೆ ಭೇಟಿ ಕೊಡಿ ಎಂದು ನಾನು ಯಾವಾಗಲೂ ಹೇಳುತ್ತೇನೆ. ನಿಮ್ಮ ರಾಜ್ಯದ ಹೊರತಾಗಿ ಬೇರೆ ಕಡೆ ನೀವು ಪ್ರವಾಸ ಮಾಡಿ.

  6. ಚರವೈತಿ.. ಚರವೈತಿ ಸ್ಫೂರ್ತಿಯಂತೆ ನಾವು ಇಂದು ಮನ್‌ ಕೀ ಬಾತ್‌ನ 100ನೇ ಸಂಚಿಕೆಯನ್ನು ಪೂರ್ಣಗೊಳಿಸುತ್ತಿದ್ದೇವೆ. ಮನ್‌ ಕೀ ಬಾತ್‌ ದೇಶದ ಸಾಮಾಜಿಕ ಚೌಕಟ್ಟನ್ನು ಗಟ್ಟಿಗೊಳಿಸುತ್ತಿದೆ. ಮನ್‌ ಕೀ ಬಾತ್ ಎಂಬುದು ಜಪಮಣಿಯಲ್ಲಿರುವ ನೂಲಿನಂತೆ, ಎಲ್ಲವನ್ನೂ ಒಟ್ಟಿಗೆ ಹಿಡಿದುಕೊಂಡಿದೆ.

  7. ಪ್ರತೀ ಸಂಚಿಕೆಯಲ್ಲೂ ದೇಶವಾಸಿಗಳ ಸೇವೆ ಹಾಗೂ ಸಾಮರ್ಥ್ಯ ಬೇರೆಯವರಿಗೆ ಸ್ಫೂರ್ತಿ ನೀಡಿದೆ. ಈ ಕಾರ್ಯಕ್ರಮದಲ್ಲಿ ಒಬ್ಬ ದೇಶವಾಸಿ ಇನ್ನೊಬ್ಬ ದೇಶವಾಸಿಗೆ ಪ್ರೇರಣೆಯಾಗಿದೆ. ಒಂದು ಸಂಚಿಕೆಯು ಇನ್ನೊಂದು ಸಂಚಿಕೆಗೆ ಭೂಮಿಕೆ ಒದಗಿಸಿಕೊಡುತ್ತಿದೆ.

  8. ಸಾಮೂಹಿಕ ಪ್ರಯತ್ನದಿಂದ ದೊಡ್ಡ ಬದಲಾವಣೆಗಳು ಸಾಧ್ಯ ಎನ್ನುವ ಬಲವಾದ ನಂಬಿಕೆ ನನಗೆ ಇದೆ

  9. ಮನ್‌ ಕೀ ಬಾತ್‌ನಿಂದಾಗಿ ಹಲವು ಚಳವಳಿಗಳು ವೇಗ ಪಡೆದಿವೆ. ಉದಾಹರಣೆಗೆ ದೇಶದಲ್ಲಿ ಆಟಿಕೆ ಉದ್ಯಮ ಮರು ನಿರ್ಮಾಣ ಯೋಜನೆ ಆರಂಭವಾಗಿದ್ದೇ, ಮನ್‌ ಕೀ ಬಾತ್‌ನಿಂದಾಗಿ. ಭಾರತೀಯ ಶ್ವಾನ ತಳಿಯ ಬಗ್ಗೆ ಜಾಗೃತಿ ಮೂಡಿದ್ದೂ ಕೂಡ ಮನ್‌ ಕೀ ಬಾತ್‌ನಿಂದಲೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT