ನವದೆಹಲಿ: ಆಕಾಶವಾಣಿಯಲ್ಲಿ ಪ್ರಸಾರವಾಗುವ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ಕಾರ್ಯಕ್ರಮ ಶುರುವಾದಾಗಿನಿಂದ ವಿವಿಧ ಪ್ಲಾಟ್ಫಾರ್ಮ್ಗಳಿಂದ ₹34.13 ಕೋಟಿ ಆದಾಯ ಗಳಿಸಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್. ಮುರುಗನ್ ರಾಜ್ಯಸಭೆಗೆ ತಿಳಿಸಿದ್ದಾರೆ.

‘ಮನ್ ಕಿ ಬಾತ್’ ರೇಡಿಯೊ ಕಾರ್ಯಕ್ರಮದಿಂದ ಆಕಾಶವಾಣಿಗೆ ಹೆಚ್ಚಿನ ಆದಾಯ ಯೂಟ್ಯೂಬ್, ಫೇಸ್ಬುಕ್ನಿಂದ ಬಂದಿದೆ ಎಂದು ಅವರು ತಿಳಿಸಿದ್ದಾರೆ.

ಹೆಚ್ಚುವರಿ ವೆಚ್ಚವಿಲ್ಲದೇ ಇದ್ದ ಸಂಪನ್ಮೂಲಗಳನ್ನೇ ಬಳಸಿಕೊಂಡು ಈ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ದೇಶದ ಕೋಟ್ಯಂತರ ಜನರಿಗೆ ಮೋದಿ ಅವರ ಮಾತುಗಳು ತಲುಪುತ್ತಿವೆ ಎಂದು ತಿಳಿಸಿದ್ದಾರೆ.

ಆಕಾಶವಾಣಿಯಲ್ಲಿ ಪ್ರಸಾರವಾಗುವ ಮೋದಿ ಅವರ ಮನದ ಮಾತುಗಳು ಡಿಜಿಟಲ್ ರೂಪದಲ್ಲಿ ಯೂಟ್ಯೂಬ್, ಫೇಸ್ಬುಕ್, ಎಕ್ಸ್, ದೂರದರ್ಶನ ಹಾಗೂ ನ್ಯೂಸ್ ಆನ್ ಎಐಆರ್ ಆ್ಯಪ್ನಲ್ಲಿಯೂ ಕೇಳುಗರಿಗೆ ಲಭ್ಯವಿರುತ್ತವೆ. ಮನ್ ಕಿ ಬಾತ್ ಜನಪ್ರಿಯ ಕಾರ್ಯಕ್ರಮ ಆಗಿರುವುದರಿಂದ ಆ ಪ್ಲಾಟ್ಫಾರ್ಮ್ಗಳಿಂದ ಆಕಾಶವಾಣಿಗೆ ಆದಾಯ ಬರುತ್ತದೆ ಎಂದು ವಿವರಿಸಿದ್ದಾರೆ.

ಮನ್ ಕಿ ಬಾತ್ಗೆ ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲಿಯೂ ಕೇಳುಗರಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಮುರುಗನ್ ತಿಳಿಸಿದ್ದಾರೆ.

2014 ಅಕ್ಟೋಬರ್ 3 ರಂದು ಆರಂಭವಾದ ಮನ್ ಕಿ ಬಾತ್ ಅಥವಾ ‘ಮನದ ಮಾತು‘ ಆಕಾಶವಾಣಿಯ ಮಾಸಿಕ ರೇಡಿಯೊ ಕಾರ್ಯಕ್ರಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನೆಚ್ಚಿನ ವಿಷಯ ಬಗ್ಗೆ ಹಾಗೂ ಜನರ ಸಲಹೆ ನೀಡಿದ ವಿಷಯಗಳ ಬಗ್ಗೆ ಅರ್ಧ ಗಂಟೆ ಮಾತನಾಡುತ್ತಾರೆ.
.ಸಿಬಿಎಸ್ಇ ಅಧ್ಯಕ್ಷರಾಗಿ ರಾಹುಲ್ ಸಿಂಗ್ ಮುಂದುವರಿಕೆ.ಮೋದಿಯವರ 100ನೇ ‘ಮನ್ ಕಿ ಬಾತ್’ ಕೇಳಲು ಉತ್ತರಾಖಂಡದಲ್ಲಿ ವಿಶೇಷ ವ್ಯವಸ್ಥೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.