ಅಚ್ಯುತಪುರ(ಆಂಧ್ರಪ್ರದೇಶ): ಆಂಧ್ರಪ್ರದೇಶದ ಔಷಧ ತಯಾರಿಕಾ ಕಂಪನಿಯ ಘಟಕವೊಂದರಲ್ಲಿ ಬುಧವಾರ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.
‘ಮಧ್ಯಾಹ್ನ 2 ಗಂಟೆಗೆ ‘ಎಸೈನ್ಷಿಯಾ ಫಾರ್ಮಾ’ ಕಂಪನಿಯ ಘಟಕದಲ್ಲಿ ಅವಘಡ ಸಂಭವಿಸಿದ್ದು, ಗಾಯಗೊಂಡ 30 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅನಕಪಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿ ವಿಜಯ ಕೃಷ್ಣನ್ ತಿಳಿಸಿದ್ದಾರೆ.
‘ಘಟಕದೊಳಗೆ ಸಿಲುಕಿಹಾಕಿಕೊಂಡಿದ್ದ 13 ಜನರನ್ನು ರಕ್ಷಿಸಲಾಗಿದೆ. ರಿಯಾಕ್ಟರ್ ಸ್ಫೋಟದಿಂದ ಈ ಘಟನೆ ನಡೆದಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
‘ವಿದ್ಯುತ್ ಶಾಟ್‌ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆಗಳಿವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.