‘ಮೋದಿ ಸರ್ಕಾರದಿಂದ ಕಠಿಣ ನೀತಿ’
ದೇಶವನ್ನು ನಕ್ಸಲ್ ಮುಕ್ತ ಮಾಡಬೇಕು ಎಂಬ ಅಭಿಯಾನದಲ್ಲಿ ಭದ್ರತಾ ಪಡೆಗಳು ಛತ್ತೀಸಗಢದಲ್ಲಿ 22 ನಕ್ಸಲರನ್ನು ಹತ್ಯೆ ಮಾಡುವ ಮೂಲಕ ದೊಡ್ಡ ಯಶ ಗಳಿಸಿವೆ. ಮೋದಿ ಸರ್ಕಾರವು ನಕ್ಸಲರ ವಿರುದ್ಧ ಕಠಿಣ ನೀತಿ ರೂಪಿಸಿದೆ. ಭದ್ರತಾ ಪಡೆಗಳ ಮುಂದೆ ಶರಣಾಗತಿ ಹೊಂದಿ, ಸಮಾಜದ ಮುಖ್ಯ ವಾಹಿನಿಗೆ ಬರುವ ನಕ್ಸಲರಿಗೆ ಹಲವು ಸೌಲಭ್ಯ ಗಳನ್ನು ನೀಡಲಾಗಿದೆ. ಆದರೂ ನಕ್ಸಲರು ಶರಣಾಗುತ್ತಿಲ್ಲ. 2026ರ ಮಾರ್ಚ್ 31ಕ್ಕೆ ದೇಶವು ನಕ್ಸಲ್ ಮುಕ್ತ ದೇಶವಾಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಅವರು ಹೇಳಿದ್ದಾರೆ.