ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳಮೀಸಲಾತಿ: ಎಸ್‌ಪಿ, ಕಾಂಗ್ರೆಸ್‌ ಮೌನಕ್ಕೆ ಮಾಯಾವತಿ ವಾಗ್ದಾಳಿ

Published : 24 ಆಗಸ್ಟ್ 2024, 14:19 IST
Last Updated : 24 ಆಗಸ್ಟ್ 2024, 14:19 IST
ಫಾಲೋ ಮಾಡಿ
Comments

ಲಖನೌ: ಪರಿಶಿಷ್ಟ ಜಾತಿಗಳ ಉಪ ವರ್ಗೀಕರಣ ಮಾಡುವ ಮೂಲಕ ಒಳಮೀಸಲಾತಿ ನೀಡಬಹುದು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪಿನ ಕುರಿತು ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್‌ ಮೌನವಾಗಿವೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಶನಿವಾರ ಆರೋಪಿಸಿದ್ದಾರೆ.

ಕಾಂಗ್ರೆಸ್‌, ಸಮಾಜವಾದಿ ಪಕ್ಷ ಸೇರಿದಂತೆ ಇತರೆ ಪಕ್ಷಗಳ ನಡವಳಿಕೆ ಹಿಂದಿನಿಂದಲೂ ಮೀಸಲಾತಿಯ ವಿರುದ್ಧವಾಗಿದೆ. ಆಗಸ್ಟ್‌ 21ರಂದು ನಡೆದ ಭಾರತ್ ಬಂದ್‌ಗೆ ಅವರು ಬೆಂಬಲ ನೀಡದೆ ಇರುವುದನ್ನು ನೋಡಿದರೆ ಇದು ಸಾಬೀತಾಗುತ್ತದೆ ಎಂದಿದ್ದಾರೆ.

ಸುಪ್ರೀಂ ಕೋರ್ಟ್‌ ತೀರ್ಪಿನ ಪರವಾಗಿದ್ದಾರೋ ಅಥವಾ ವಿರುದ್ಧವಾಗಿದ್ದಾರೋ ಎಂಬ ಸ್ಪಷ್ಟ ಹೇಳಿಕೆ ನೀಡಿಲ್ಲ. ಏಕೆ ಈ ಗೊಂದಲ ಎಂದು ಮಾಯಾವತಿ ಅವರು ‘ಎಕ್ಸ್‌’ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಸರಣಿ ಪ‍್ರಶ್ನೆಗಳನ್ನು ಕೇಳಿದ್ದಾರೆ.

ಎಸ್‌ಪಿ, ಕಾಂಗ್ರೆಸ್‌ ಸೇರಿದಂತೆ ಇತರೆ ಪಕ್ಷಗಳು ಬಲವಂತದಿಂದ ಪರಿಶಿಷ್ಟ ಜಾತಿ/ಪಂಗಡದ ಮೀಸಲಾತಿ ಪರವಾಗಿ ಮಾತನಾಡುತ್ತಿದ್ದಾರೆ. ಆದರೆ, ಒಳ ಮೀಸಲಾತಿ ಮತ್ತು ಕೆನೆ ಪದರಕ್ಕೆ ಸಂಬಂಧಿಸಿದಂತೆ ಆ.1ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಗ್ಗೆ ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಮೌನವು ಅವರಲ್ಲಿರುವ ಮೀಸಲಾತಿ ವಿರೋಧಿ ಚಿಂತನೆಯನ್ನು ಪ್ರತಿಬಿಂಬಿಸುತ್ತಿದೆ. ಈ ಬಗ್ಗೆ ಜಾಗರೂಕರಾಗಿರಬೇಕು ಎಂದಿದ್ದಾರೆ.

ಮೀಸಲಾತಿಯ ವಿರುದ್ಧ ಎಸ್‌ಪಿ, ಕಾಂಗ್ರೆಸ್‌ ಹಾಗೂ ಇತರೆ ಪಕ್ಷಗಳು ಆಂತರಿಕವಾಗಿ ಮತ್ತೆ ಒಗ್ಗಟ್ಟಾಗಿರುವಂತೆ ತೋರುತ್ತಿದೆ. ಇಂತಹ ಸನ್ನಿವೇಶದಲ್ಲಿ ಪರಿಶಿಷ್ಟ ಜಾತಿ/ಪಂಗಡದ ಜನರಷ್ಟೇ ಅಲ್ಲದೆ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಜನರು ತಮ್ಮ ಮೀಸಲಾತಿಯ ಹಕ್ಕು, ಸಂವಿಧಾನದ ರಕ್ಷಣೆ ಹಾಗೂ ಜಾತಿಗಣತಿ ನಡೆಸುವಂತೆ ಬುದ್ಧಿವಂತಿಕೆಯಿಂದ ಹೋರಾಟವನ್ನು ಹಮ್ಮಿಕೊಳ್ಳಬೇಕಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT