ಮೀರಠ್: ದೇಶದ ಅತಿ ವೇಗದ ಮೀರಠ್ ಮೆಟ್ರೊ ಹಾಗೂ ನಮೋ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಚಾಲನೆ ನೀಡಿದ್ದಾರೆ.

ಶತಾಬ್ದಿ ನಗರ ನಿಲ್ದಾಣದಿಂದ ಮೀರಠ್ ದಕ್ಷಿಣ ನಿಲ್ದಾಣದವರೆಗೆ ಪ್ರಧಾನಿ ಮೋದಿ ಸಂಚರಿಸಿದರು.

ಇದೇ ಸಂದರ್ಭದಲ್ಲಿ ಮೀರಠ್ನಲ್ಲಿ ಸುಮಾರು ₹12,930 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೂ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಪ್ರಧಾನಿ ಮೋದಿ ಅವರು 82 ಕಿ.ಮೀ. ಉದ್ದದ ದೆಹಲಿ ಮೀರಠ್ ನಮೋ ಭಾರತ್ ಕಾರಿಡಾರ್ ಅನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದರ ಭಾಗವಾದ ನಮೋ ಭಾರತ್ ರೀಜನಲ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಂ (ಆರ್ಆರ್ಟಿಎಸ್) ಅನ್ನು ಉದ್ಘಾಟಿಸಿದರು. ಇದರಲ್ಲಿ ದೆಹಲಿಯ ಸರಾಯ್ ಕಾಲೇ ಖಾನ್ ಮತ್ತು ನ್ಯೂ ಅಶೋಕ್ ನಗರ ನಡುವಣ 5 ಕಿ.ಮೀ. ಮತ್ತು ಮೀರಠ್ ದಕ್ಷಿಣ ಹಾಗೂ ಉತ್ತರ ಪ್ರದೇಶದ ಮೋದಿಪುರಂ ನಡುವಣ 21 ಕಿ.ಮೀ. ಸೇರಿವೆ.

ಗಂಟೆಗೆ 180 ಕಿ.ಮೀ. ಸಾಮರ್ಥ್ಯದ ನಮೋ ಭಾರತ್ ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ. ಇದು ಸಾಹೀಬಾಬಾದ್, ಗಾಜಿಯಾಬಾದ್, ಮೋದಿನಗರ ಮತ್ತು ಮೀರಠ್ನಂತಹ ಪ್ರಮುಖ ನಗರಗಳನ್ನು ದೆಹಲಿಯೊಂದಿಗೆ ವೇಗವಾಗಿ ಸಂಪರ್ಕಿಸುತ್ತದೆ.

ಮೀರತ್ ದಕ್ಷಿಣ ಹಾಗೂ ಮೋದಿಪುರಂ ನಡುವಣ ಮೆಟ್ರೊ ರೈಲು ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ನಮೋ ಭಾರತ್ ಹಾಗೂ ಮೀರಠ್ ಮೆಟ್ರೊ ರೈಲುಗಳು ಒಂದೇ ಹಳಿಗಳ ಮೇಲೆ ಸಂಚರಿಸಲಿವೆ.

ಮೀರಠ್ ಮೆಟ್ರೊ ದೇಶದ ಅತ್ಯಂತ ವೇಗದ ಮೆಟ್ರೊ ವ್ಯವಸ್ಥೆಯಾಗಿದೆ. ಇದರ ಕಾರ್ಯಾಚರಣೆಯ ಗರಿಷ್ಠ ವೇಗ ಗಂಟೆಗೆ 120 ಕಿ.ಮೀ. ಆಗಿದೆ. ಕೇವಲ 30 ನಿಮಿಷಗಳಲ್ಲಿ ಗಮ್ಯಸ್ಥಾನವನ್ನು ತಲುಪಲಿದೆ.

ನಗರಗಳಿಂದ ನಗರಗಳಿಗೆ ಅಥವಾ ನಗರದ ಸುತ್ತುಮುತ್ತಲಿನ ಪ್ರದೇಶಗಳಿಗೆ ಸಂಪರ್ಕ ಜಾಲವನ್ನು ಇದು ಖಚಿತಪಡಿಸುತ್ತದೆ. ಅಲ್ಲದೆ ರಸ್ತೆಯಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.