ಅಹಮದಾಬಾದ್ನಲ್ಲಿ ಸೋಮವಾರ ಬಂದಿಳಿದ ಅಮೆರಿಕದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್, ಶ್ವೇತವರ್ಣದ ಜಂಪ್ಸೂಟ್ ಜತೆಗೆ ಹಸಿರು ಹಾಗೂ ಬಂಗಾರದ ಬಣ್ಣದ ಕುಸುರಿ ಉಳ್ಳ ರೇಷ್ಮೆಯ ‘ಸ್ಯಾಶ್’ ಧರಿಸಿ ಗಮನ ಸೆಳೆದರು.

ವಸ್ತ್ರವಿನ್ಯಾಸಕಾರ ಹರ್ವೆ ಪಿಯರ್ ಅವರು ಈ ಜಂಪ್ಸೂಟ್ ವಿನ್ಯಾಸಗೊಳಿಸಿದ್ದರು. ಮೆಲೇನಿಯಾ ಅವರು ಸೊಂಟದ ಪಟ್ಟಿಯ ರೀತಿ ಧರಿಸಿದ್ದ ವಸ್ತ್ರವು ಭಾರತ ಮೂಲದ್ದಾಗಿದ್ದು, ಈ ಮೂಲಕ ಅವರ ದಿರಿಸಿನಲ್ಲಿ ಭಾರತೀಯತೆ ಸೇರಿಕೊಂಡಿತ್ತು.

‘ಮೆಲೇನಿಯಾ ಧರಿಸಿರುವ ಸ್ಯಾಶ್ (ದಿರಿಸಿನ ಮೇಲೆ ಸೊಂಟದ ಸುತ್ತಲೂ ಕಟ್ಟಿಕೊಳ್ಳುವ ಬಣ್ಣಬಣ್ಣದ ವಸ್ತ್ರ), ಭಾರತದಲ್ಲಿ 20ನೇ ಶತಮಾನದಲ್ಲಿ ತಯಾರಾದ ವಸ್ತ್ರವೊಂದರ ಅಂಚಿನಿಂದ ಸಿದ್ಧಪಡಿಸಿದ್ದು. ಉತ್ತಮ ಸಂಗ್ರಹಕಾರರಾಗಿರುವ ನನ್ನ ಸ್ನೇಹಿತರಿಂದ ಪ್ಯಾರಿಸ್ನಲ್ಲಿ ಈ ವಸ್ತ್ರ ದೊರಕಿತು. ಈ ಅಂಚು ಆಕರ್ಷಕವಾಗಿ ಕಾಣಿಸಿದ್ದರಿಂದ ಇದನ್ನು ನಾವು ಬಳಸಿಕೊಂಡೆವು’ ಎಂದು ಹರ್ವೆ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.