ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್‌ನ ಕಚ್‌ನಲ್ಲಿ ಲಘು ಭೂಕಂಪ: ತಿಂಗಳಲ್ಲಿ ಮೂರನೇ ಕಂಪನ

Published 17 ಮಾರ್ಚ್ 2024, 5:21 IST
Last Updated 17 ಮಾರ್ಚ್ 2024, 5:21 IST
ಅಕ್ಷರ ಗಾತ್ರ

ಅಹಮದಾಬಾದ್‌: ಗುಜರಾತ್‌ನ ಕಚ್‌ ಜಿಲ್ಲೆಯಲ್ಲಿ ಶನಿವಾರ ಮಧ್ಯರಾತ್ರಿ ಲಘು ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ಸಂಶೋಧನಾ ಸಂಸ್ಥೆ ಹೇಳಿದೆ. ರಿಕ್ಟರ್ ಮಾಪ‍ಕದಲ್ಲಿ 3.3 ತೀವ್ರತೆ ದಾಖಲಾಗಿದೆ.

ಮಧ್ಯರಾತ್ರಿ 12.12ರ ಹೊತ್ತಿಗೆ ಕಂಪನ ಸಂಭವಿಸಿದ್ದು, ಕಾವ್ಡಾದ ಪೂರ್ವ-ದಕ್ಷಿಣಕ್ಕೆ 22 ಕಿ.ಮಿ ದೂರದಲ್ಲಿ ಕೇದ್ರಬಿಂದು ಪತ್ತೆಯಾಗಿದೆ.

‌ಯಾವುದೇ ಸಾವು ನೋವು ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ಜಿಲ್ಲೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ತಿಂಗಳಲ್ಲಿ ಕಚ್‌ನಲ್ಲಿ ದಾಖಲಾಗುತ್ತಿರುವ ಮೂರನೇ ಭೂಕಂಪ ಇದು.

ಮಾರ್ಚ್‌5 ಹಾಗೂ 11ರಂದು ಕ್ರಮವಾಗಿ 3.2 ಹಾಗೂ 3.5 ತೀವ್ರತೆಯ ಭೂಕಂಪ ಸಂಭವಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT