ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ವಾರಣಾಸಿಯಲ್ಲಿ ರೋಡ್ ಶೋ ನಡೆಸಿದ್ದು, ಇದಕ್ಕಾಗಿ ಬುಧವಾರ ಸಂಜೆಯೇ ರಸ್ತೆಗಳನ್ನು ಸ್ವಚ್ಛಗೊಳಿಸಲಾಗಿತ್ತು.ವಾರಣಾಸಿಯ ಜನಸಂಖ್ಯೆಯ ಶೇ. 30 ರಷ್ಟು ಜನರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೆ ರಸ್ತೆ ಶುಚಿಗೊಳಿಸಲು 1.4 ಲಕ್ಷ ಲೀಟರ್ ಬಳಕೆಯಾಗಿದೆ ಎಂದು ದಿ ಟೆಲಿಗ್ರಾಫ್ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋಗಾಗಿ ರಸ್ತೆಯನ್ನು ತೊಳೆದು ಸ್ವಚ್ಛ ಮಾಡಬೇಕೆಂದು ನಮಗೆ ಆದೇಶಿಸಿದ್ದರುಎಂದು ಅಲ್ಲಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವಾರಾಣಸಿ ನಗರ ಪಾಲಿಕೆಯ 40 ವಾಟರ್ ಟ್ಯಾಂಕರ್ ಮತ್ತು 400 ನೌಕರರನ್ನು ರಸ್ತೆ ಸ್ವಚ್ಛಗೊಳಿಸುವುದಕ್ಕಾಗಿ ಬಳಸಲಾಗಿದೆ.

ವಾರಾಣಸಿ ಅಂತರರಾಷ್ಟ್ರೀಯ ಪ್ರವಾಸ ಸ್ಥಳ ಆಗಿದ್ದರೂ ಇಲ್ಲಿನ ಶೇ. 70 ಮನೆಗಳಿಗೆ ಮಾತ್ರ ನೀರು ಸರಬರಾಜು ವ್ಯವಸ್ಥೆ ಇದೆ ಎಂದು ವಾರಣಾಸಿ ನಗರ ಪಾಲಿಕೆಹೇಳಿದೆ.

ದಿನಗಳ ಹಿಂದೆಯಷ್ಟೇ ಬುಂದೇಲ್ಖಂಡದ ಬಂದಾದಲ್ಲಿ ಮಾತನಾಡಿದ ಮೋದಿ, ಮತ್ತೊಮ್ಮೆ ಮೋದಿ ಸರ್ಕಾರ ಬಂದರೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು.ಮುಂದಿನ ಐದು ವರ್ಷಗಳಲ್ಲಿ ಎಲ್ಲ ಮನೆಗಳಿಗೂ ನೀರು ಸಿಗುವಂತಾಗುತ್ತದೆ. ನದಿ, ಸಾಗರ ಮತ್ತು ಮಳೆ ನೀರನ್ನು ಸಮರ್ಪಕವಾಗಿ ಬಳಸುವ ತಂತ್ರಜ್ಞಾನ ತರಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.