ಕೋಲ್ಕತ್ತ: ಇಲ್ಲಿನ ಖಾಸಗಿ ವಾಣಿಜ್ಯ ಸಂಕೀರ್ಣವೊಂದರ6ನೇ ಮಹಡಿಯಿಂದ₹2000 ಮತ್ತು ₹100ರ ಮುಖಬೆಲೆಯ ನೋಟುಗಳನ್ನು ಗಾಳಿಯಲ್ಲಿ ತೂರಲಾಗಿದೆ.
ಕೊಲ್ಕತ್ತ ನಗರದ ಮಧ್ಯಭಾಗದಲ್ಲಿರುವಬೆಂಟಿಂಕ್ ವಾಣಿಜ್ಯ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆನಡೆದಿದೆ ಎನ್ನಲಾಗಿದೆ.
ಸ್ಥಳೀಯ ವ್ಯಾಪಾರಿಯೊಬ್ಬತನ್ನಮೊಬೈಲ್ಮೂಲಕ ಈ ಘಟನೆಯನ್ನುಚಿತ್ರೀಕರಿಸಿದ್ದು, ಆವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ಅಗಿದೆ.
#WATCH Bundles of currency notes were thrown from a building at Bentinck Street in Kolkata during a search at office of Hoque Merchantile Pvt Ltd by DRI officials earlier today. pic.twitter.com/m5PLEqzVwS
ಖಾಸಗಿಸಂಕೀರ್ಣದ ಮೇಲೆಕಂದಾಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದಾಗಈ ಘಟನೆ ನಡೆದಿರುವುದಾಗಿಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ನಾವು ಈ ವಾಣಿಜ್ಯ ಸಂಕೀರ್ಣದಲ್ಲಿರುವಇತರ ಕಚೇರಿಗಳ ಮೇಲೆ ದಾಳಿನಡೆಸಿದ್ದು, 6ನೇ ಮಹಡಿಯ ಹಣದ ತೂರಾಟದ ಘಟನೆಗೂ, ನಮ್ಮ ದಾಳಿಗೂ ಯಾವುದೇ ಸಂಬಂಧವಿಲ್ಲ,ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.