ಮಹಾರಾಷ್ಟ್ರದಲ್ಲಿ ಆಡಳಿತ ವ್ಯವಸ್ಥೆಯೇ ಇಲ್ಲದಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಮಳೆಗೆ ಮುಂಬೈ ಕುಸಿದುಬಿದ್ದಿದೆ. ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಬಿಜೆಪಿಯ ನಿಯಂತ್ರಣದಲ್ಲಿರುವುದರ ಪರಿಣಾಮವನ್ನು ಇಂದು ದಕ್ಷಿಣ ಮತ್ತು ಕೇಂದ್ರ ಮುಂಬೈ ಎದುರಿಸಿವೆ.
– ಆದಿತ್ಯ ಠಾಕ್ರೆ ಶಿವಸೇನಾ (ಯುಬಿಟಿ) ಶಾಸಕ
ಬಿಎಂಸಿಯು ಮುಂಬೈನ ರಸ್ತೆಗಳಿಗಾಗಿ ₹3 ಲಕ್ಷ ಕೋಟಿ ವೆಚ್ಚ ಮಾಡಿದ್ದನ್ನು ಶಿವಸೇನಾ (ಯುಬಿಟಿ) ಮತ್ತು ಬಿಎಂಸಿ ಗುತ್ತಿಗೆದಾರರು ಲೂಟಿ ಮಾಡಿದ್ದಾರೆ... ಮಿಥಿ ನದಿ ಸ್ವಚ್ಛಗೊಳಿಸುವ ಬೋಗಸ್ ಕೆಲಸಕ್ಕೆ ₹1000 ಕೋಟಿ ವೆಚ್ಚ ಮಾಡಲಾಗಿದೆ.
– ಆಶಿಷ್ ಶೆಲಾರ್ ಮಹಾರಾಷ್ಟ್ರ ಸಚಿವ
ಆಚಾರ್ಯ ಆತ್ರೇಯ ನಿಲ್ದಾಣವನ್ನು ಮುಚ್ಚಲಾಗಿದೆ. ನೀರು ತುಂಬಿಕೊಂಡಿರುವ ನೆಲದ ಅಡಿಯ ನಿಲ್ದಾಣವು ಎಷ್ಟು ಅಪಾಯಕಾರಿ ಇದನ್ನು ಮಹಾಯುತಿ ಸರ್ಕಾರ ಗಂಭೀರವಾಗಿ ಪರಿಗಣಿಸುತ್ತದೆಯೇ? ಮುನ್ನೆಚ್ಚರಿಕೆ ಕ್ರಮಗಳನ್ನು ಏಕೆ ತೆಗೆದುಕೊಳ್ಳಲಿಲ್ಲ?