ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ನಿ ಮೇಲೆ ಹಲ್ಲೆ ಆರೋಪ: ಉದ್ಯಮಿ ವಿವೇಕ ಬಿಂದ್ರಾ ವಿರುದ್ಧ ಪ್ರಕರಣ

Published 23 ಡಿಸೆಂಬರ್ 2023, 6:37 IST
Last Updated 23 ಡಿಸೆಂಬರ್ 2023, 6:37 IST
ಅಕ್ಷರ ಗಾತ್ರ

ನೋಯ್ಡಾ: ಪತ್ನಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಪ್ರೇರಕ ಮಾತುಗಾರ (ಮೊಟಿವೇಷನಲ್‌ ಸ್ಪೀಕರ್), ಉದ್ಯಮಿ ವಿವೇಕ ಬಿಂದ್ರಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಬಿಂದ್ರಾ ಅವರ ಪತ್ನಿ ಯಾನಿಕಾ ಅವರ ಸಹೋದರ ವೈಭವ್ ಕ್ವಾತ್ರಾ ಅವರು ನೀಡಿದ ದೂರಿನ‌ನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

‘ಡಿಸೆಂಬರ್ 7ರಂದು ನನ್ನ ಭಾವ(ವಿವೇಕ್‌ ಬಿಂದ್ರಾ) ಅವರ ತಾಯಿಯೊಂದಿಗೆ ಜಗಳವಾಡುತ್ತಿದ್ದರು. ಈ ವೇಳೆ ನನ್ನ ಸಹೋದರಿ(ಯಾನಿಕಾ) ಮಧ್ಯಪ್ರವೇಶಿಸಿದ್ದರು. ಇದರಿಂದ ಕೋಪಗೊಂಡ ಭಾವ ನನ್ನ ಸಹೋದರಿಯನ್ನು ಕೋಣೆಯೊಳಗೆ ಕೂಡಿ ಹಾಕಿ ಥಳಿಸಿದ್ದಾರೆ. ಅವಳ ಮೊಬೈಲ್‌ ಫೋನ್‌ ಪುಡಿ ಮಾಡಿದ್ದಾರೆ. ಸಹೋದರಿಯ ತಲೆ ಮತ್ತು ಮೈಮೇಲೆ ಗಾಯಗಳಾಗಿದ್ದು, ಕಿವಿ ಸರಿಯಾಗಿ ಕೇಳಿಸುತ್ತಿಲ್ಲ. ದೆಹಲಿಯ ಕೈಲಾಶ್ ದೀಪಕ್ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ದೂರಿನಲ್ಲಿ ವೈಭವ್ ಉಲ್ಲೇಖಿಸಿದ್ದಾರೆ.

‘ದೂರಿನನ್ವಯ ಐಪಿಸಿ ಸೆಕ್ಷನ್‌ 323 (ನೋವುಂಟು ಮಾಡುವುದು), 504 (ಶಾಂತಿ ಭಂಗವನ್ನು ಪ್ರಚೋದಿಸುವ ಅವಮಾನ), 325 (ಸ್ವಯಂಪ್ರೇರಿತವಾಗಿ ನೋವನ್ನುಂಟುಮಾಡುವುದು), 427 (ಕಿಡಿಗೇಡಿತನ) ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಸಹಾಯಕ ಪೊಲೀಸ್ ಆಯುಕ್ತ (ನೋಯ್ಡಾ) ರಜನೀಶ್ ವರ್ಮಾ ತಿಳಿಸಿದ್ದಾರೆ.

‘ಪ್ರಕರಣದ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕ ಪರಿಶೀಲಿಸಲಾಗುತ್ತಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT