ಪನ್ನಾ: ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ (ಪಿಟಿಆರ್) ಹುಲಿಯೊಂದು ಎರಡು ಮರಿಗಳಿಗೆ ಜನ್ಮ ನೀಡಿದೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಪಿ–234 ಹುಲಿಯು ಅಕೋಲ ಬಫರ್ ಪ್ರದೇಶದಲ್ಲಿ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದೆ. ಮರಿಗಳು ಆರೋಗ್ಯಯುತವಾಗಿದ್ದು, ಅವುಗಳು ಜನಿಸಿ ಸುಮಾರು ನಾಲ್ಕು ತಿಂಗಳಾಗಿರಬಹುದು ಎಂದು ಪಿಟಿಆರ್ ಕ್ಷೇತ್ರ ನಿರ್ದೇಶಕ ಬ್ರಿಜೇಂದ್ರ ಝಾ ಮಾಹಿತಿ ನೀಡಿದರು.
ಮೇ ಮೊದಲ ವಾರದಲ್ಲಿ, ಮತ್ತೊಂದು ಹುಲಿ ಪಿ–234 (23) ಸಹ ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ಮೇ ತಿಂಗಳಲ್ಲಿ ಪಿಟಿಆರ್‌ನಲ್ಲಿ ನಾಲ್ಕು ಮರಿಗಳು ಜನಿಸಿದಂತಾಗಿದೆ. ಇತ್ತೀಚಿನ ಗಣತಿ ಪ್ರಕಾರ ಪಿಟಿಆರ್‌ನಲ್ಲಿ 78 ಹುಲಿಗಳಿವೆ ಎಂದೂ ಅವರು ಹೇಳಿದರು.