ವಯನಾಡ್: ಜುಲೈ 30ರಂದು ಭೂಕುಸಿತ ಉಂಟಾದ ವಯನಾಡ್‌ನ ಪುಂಜಿರಿಮಟ್ಟಂ ಸಮೀಪದಲ್ಲಿಯೇ ಶನಿವಾರ ಮಣ್ಣು ಕುಸಿತ ಸಂಭವಿಸಿದೆ.
ಆ ಪ್ರದೇಶದಲ್ಲಿ ಶೋಧ ಕಾರ್ಯ ಮತ್ತು ಇತರ ಕೆಲಸಗಳಲ್ಲಿ ತೊಡಗಿರುವವರು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಜುಲೈ 30 ರಂದು ವಯನಾಡ್‌ನ ಪುಂಜಿರಿಮಟ್ಟಂ, ಚೂರಲ್‌ಮಲ ಹಾಗೂ ಮುಂಡಕ್ಕೈನಲ್ಲಿ ಸಂಭವಿಸಿದ್ದ ದುರಂತದಲ್ಲಿ 200ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. ಇನ್ನೂ 78 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.