ಮುಂಬೈ: ಷೇರುಪೇಟೆಯಲ್ಲಿ ಹಣ ತೊಡಗಿಸಿದರೆ, ಅಲ್ಪಾವಧಿಯಲ್ಲಿ ದುಪ್ಪಟ್ಟು ಲಾಭ ಸಿಗುತ್ತದೆ ಎಂಬ ಸೈಬರ್ ವಂಚಕರ ಮಾತಿಗೆ ಮರುಳಾಗಿ ಮುಂಬೈನ 62 ವರ್ಷದ ಗೃಹಿಣಿಯೊಬ್ಬರು ₹7.88 ಕೋಟಿ ಹಣ ಕಳೆದುಕೊಂಡಿದ್ದಾರೆ.

ಷೇರುಪೇಟೆ ವಹಿವಾಟು ನಿರ್ವಹಿಸುವ ಹೆಸರಾಂತ ಹಣಕಾಸು ಸಂಸ್ಥೆಯೊಂದರ ಪ್ರತಿನಿಧಿಗಳು ಎಂಬ ಹೆಸರಿನಲ್ಲಿ ವಂಚಕರು ವಾಟ್ಸ್ಆ್ಯಪ್ ಮೂಲಕ ಮಹಿಳೆಗೆ ಲಿಂಕ್ ಕಳುಹಿಸಿದ್ದರು. ಮಹಿಳೆ ಹೂಡಿಕೆ ಬಗ್ಗೆ ಹೆಚ್ಚಿನ ಮಾಹಿತಿ ಕೋರಿದಾಗ, ಅವರ ಮೊಬೈಲ್ ಸಂಖ್ಯೆಯನ್ನು ವಾಟ್ಸ್ಆ್ಯಪ್ ಗ್ರೂಪ್ ಒಂದಕ್ಕೆ ಸೇರಿಸಲಾಗಿತ್ತು.

ಮಹಿಳೆ ಹಂತಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳಿಂದ ₹7.88 ಕೋಟಿ ಮೊತ್ತವನ್ನು ವಂಚಕರು ಸೂಚಿಸಿದ್ದ ಖಾತೆಗಳಿಗೆ ವರ್ಗಾಯಿಸಿದ್ದರು. ಅಂತಿಮವಾಗಿ ಹಣವನ್ನು ಮರಳಿ ಪಡೆಯಲು ಮುಂದಾದಾಗ, ಒಟ್ಟು ಮೊತ್ತದ ಶೇ 10ರಷ್ಟನ್ನು ಕಮಿಷನ್ ರೂಪದಲ್ಲಿ ಠೇವಣಿ ಇಡುವಂತೆ ಸೂಚಿಸಲಾಗಿತ್ತು. ಇದರಿಂದ ಅನುಮಾನಗೊಂಡ ಮಹಿಳೆ ಪೊಲೀಸರಿಗೆ ದೂರು ನೀಡಿದಾಗ, ಸೈಬರ್ ವಂಚನೆಗೆ ಒಳಗಾಗಿರುವುದು ತಿಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.