ಭಾನುವಾರ, 18 ಜನವರಿ 2026
×
ADVERTISEMENT
ADVERTISEMENT

ಶಿವಸೇನೆಯೋ, ಬಿಜೆಪಿಯೋ..ಮುಂಬೈ ಮೇಯರ್ ಪಟ್ಟ ಯಾರಿಗೆ?

Published : 17 ಜನವರಿ 2026, 23:30 IST
Last Updated : 17 ಜನವರಿ 2026, 23:30 IST
ಫಾಲೋ ಮಾಡಿ
Comments
ಕಾರ್ಪೊರೇಟರ್‌ಗಳು ಹೋಟೆಲ್‌ಗೆ ಸ್ಥಳಾಂತರ 
ಮುಂಬೈ ಮೇಯರ್‌ ಪಟ್ಟಕ್ಕೆ ಪೈಪೋಟಿ ಬಿರುಸುಗೊಂಡ ಬೆನ್ನಲ್ಲೇ ಶಿವಸೇನಾ ಶಿಂದೆ ಬಣವು ಹೊಸದಾಗಿ ಆಯ್ಕೆಯಾದ ಕಾರ್ಪೊರೇಟರ್‌ಗಳನ್ನು ಹೋಟೆಲ್‌ಗೆ ಸ್ಥಳಾಂತರಿಸುವ ನಿರ್ಧಾರ ಕೈಗೊಂಡಿದೆ. ಬಿಎಂಸಿ ಮೇಯರ್‌ ಆಯ್ಕೆಯಲ್ಲಿ ಬಿಜೆಪಿಗೆ ಶಿಂದೆ ಬಣದ 28 ಕಾರ್ಪೊರೇಟರ್‌ಗಳು ನಿರ್ಣಾಯಕರಾಗಿದ್ದಾರೆ.  ಶಿಂದೆ ಬಣವು ಮುಂಬೈ ಪಾಲಿಕೆಯ 90 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. 29ರಲ್ಲಿ ಜಯಗಳಿಸಿದೆ.  ‘ಚುನಾವಣಾ ಗೆಲುವಿನ ಬೆನ್ನಲ್ಲೇ ಮನೋಲ್ಲಾಸಕ್ಕಾಗಿ  ಹೊಸ ಕಾರ್ಪೊರೇಟರ್‌ಗಳನ್ನು ಬಾಂದ್ರಾದ ಐಷಾರಾಮಿ ಹೋಟೆಲ್‌ಗೆ ಸ್ಥಳಾಂತರಿಸಲಾಗಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ. ಆದರೆ ಕಾರ್ಪೊರೇಟರ್‌ಗಳು ಎಷ್ಟು ದಿನ ಹೋಟೆಲ್‌ನಲ್ಲಿ ಉಳಿಯಲಿದ್ದಾರೆ ಈ ಸ್ಥಳಾಂತರದ ಹಿಂದಿನ ಉದ್ದೇಶವೇನು ಎನ್ನುವುದನ್ನು ಅವರು ಖಚಿತಪಡಿಸಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT