ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನ್ಯಾಕ್’ ಮುಖ್ಯಸ್ಥ ಭೂಷಣ್ ಪಟವರ್ಧನ್ ರಾಜೀನಾಮೆ

ಹುದ್ದೆಯ ಪಾವಿತ್ರ್ಯ ಕಾಪಾಡಲು ರಾಜೀನಾಮೆ– ಭೂಷಣ್ ಸಮರ್ಥನೆ
Last Updated 6 ಮಾರ್ಚ್ 2023, 14:04 IST
ಅಕ್ಷರ ಗಾತ್ರ

ನವದೆಹಲಿ: ‘ಕೆಲ ವಿಶ್ವವಿದ್ಯಾಲಯಗಳು ಅನ್ಯಾಯ ಮಾರ್ಗಗಳ ಮೂಲಕ ಪ್ರಶ್ನಾರ್ಹ ಶ್ರೇಣಿಗಳನ್ನು ಪಡೆಯುತ್ತಿವೆ’ ಎಂದು ಕೆಲ ದಿನಗಳ ಹಿಂದೆಯಷ್ಟೇ ಆರೋಪಿಸಿದ್ದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಮುಖ್ಯಸ್ಥ ಭೂಷಣ್ ಪಟವರ್ಧನ್ ಅವರು ತಮ್ಮ ಹುದ್ದೆಗೆ ಸೋಮವಾರ ರಾಜೀನಾಮೆ ನೀಡಿದ್ದು, ತಮ್ಮ ಹುದ್ದೆಯ ಪಾವಿತ್ರ್ಯ ಕಾಪಾಡುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿರುವುದಾಗಿ ಹೇಳಿದ್ದಾರೆ.

ಈ ಸಂಬಂಧ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಅಧ್ಯಕ್ಷ ಎಂ. ಜಗದೀಶ್ ಕುಮಾರ್ ಅವರಿಗೆ ಭಾನುವಾರ ರಾತ್ರಿ ಅವರು ಪತ್ರ ಬರೆದಿದ್ದಾರೆ.

‘ಎಲ್ಲ ವಿಷಯವನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕವೇ ನಾನು ಯುಜಿಸಿ, ನ್ಯಾಕ್ ಮತ್ತು ಬೆಂಗಳೂರಿನ ನ್ಯಾಕ್ ಕಾರ್ಯಕಾರಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ’ ಎಂದೂ ಅವರು ಹೇಳಿದ್ದಾರೆ.

ಯುಜಿಸಿ ಅಧ್ಯಕ್ಷರಿಗೆ ಕಳೆದ ತಿಂಗಳಷ್ಟೇ ಪತ್ರ ಬರೆದಿದ್ದ ಪಟವರ್ಧನ್ ಅವರು, ‘ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಶ್ನಾರ್ಹವಾದ ಶ್ರೇಣಿಗಳನ್ನು ಪಡೆಯುತ್ತಿವೆ’ ಎಂದು ಆರೋಪಿಸಿದ್ದರು. ಈ ಕುರಿತು ಯುಜಿಸಿ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT