ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೋಧ ಪಕ್ಷವೇ ಇಲ್ಲದ ವಿಧಾನಸಭೆಯತ್ತ ನಾಗಾಲ್ಯಾಂಡ್‌

Last Updated 6 ಮಾರ್ಚ್ 2023, 11:48 IST
ಅಕ್ಷರ ಗಾತ್ರ

ಕೊಹಿಮಾ: ನಾಗಾಲ್ಯಾಂಡ್‌ನ ವಿಧಾನಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. 2015 ಹಾಗೂ 2021ರಲ್ಲಿ ಸರ್ಕಾರ ರಚನೆ ಆದ ಬಳಿಕ ವಿರೋಧ ಪಕ್ಷಗಳು ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದವು. ಆದರೆ, ಈ ಬಾರಿ ಬಹುಮತ ಪಡೆದ ಎನ್‌ಡಿಪಿಪಿ–ಬಿಜೆಪಿ ಮೈತ್ರಿಗೆ ಸರ್ಕಾರ ರಚನೆಗೂ ಮೊದಲೇ ಇತರ ಪಕ್ಷಗಳು ಬೆಂಬಲ ಘೋಷಿಸಿವೆ.

ಇದೇ 2ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿತ್ತು. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿದ್ದ ಎನ್‌ಡಿಪಿಪಿ, ಬಿಜೆಪಿ 60 ಸ್ಥಾನಗಳಲ್ಲಿ ಒಟ್ಟು 37 ಸ್ಥಾನಗಳಲ್ಲಿ ಜಯಗಳಿಸಿದ್ದವು. ಇತರ ಪಕ್ಷಗಳಾದ ಎನ್‌ಪಿಪಿ 5 ಸ್ಥಾನಗಳಲ್ಲಿ, ಎಲ್‌ಜಿಪಿ (ರಾಮ್‌ ವಿಲಾಸ್‌), ನಾಗಾ ಪೀಪಲ್ಸ್‌ ಫ್ರಂಟ್‌ (ಎನ್‌ಪಿಎಫ್‌) ಹಾಗೂ ಆರ್‌ಪಿಐ (ಅಠಾವಳೆ) ತಲಾ ಎರಡು ಸ್ಥಾನ, ಜೆಡಿಯು ಒಂದು ಸ್ಥಾನ ಹಾಗೂ 4 ಪಕ್ಷೇತರ ಅಭ್ಯರ್ಥಿಗಳು ಜಯಗಳಿಸಿದ್ದರು.

ಇದೇ ಮೊದಲ ಬಾರಿಗೆ ನಾಗಾಲ್ಯಾಂಡ್‌ನಲ್ಲಿ ಹೆಚ್ಚು ಪಕ್ಷಗಳು ಚುನಾವಣೆಯಲ್ಲಿ ಜಯಗಳಿಸಿವೆ. ಎನ್‌ಡಿಪಿಪಿ–ಬಿಜೆಪಿ ಮೈತ್ರಿಯು ಇದುವರೆಗೂ ಸರ್ಕಾರ ರಚನೆಗೆ ಹಕ್ಕು ಮಂಡಿಸಿಲ್ಲ. ಎನ್‌ಸಿಪಿ ಪಕ್ಷವು ಎನ್‌ಡಿಪಿಪಿ–ಬಿಜೆಪಿ ಮೈತ್ರಿಗೆ ಶನಿವಾರವೇ ಬೆಂಬಲ ಘೋಷಿಸಿ ಪತ್ರ ಬರೆದಿದೆ. ಎಲ್‌ಜಿಪಿ (ರಾಮ್‌ ವಿಲಾಸ್‌) ಹಾಗೂ ಆರ್‌ಪಿಐ (ಅಠವಳೆ) ಪಕ್ಷಗಳು ಬೆಂಬಲ ನೀಡುವುದಾಗಿ ಪತ್ರ ಬರೆದಿವೆ.

‘ಪಕ್ಷವು ಅಂತಿಮ ನಿರ್ಧಾರವನ್ನು ಇದುವರೆಗೂ ಕೈಗೊಂಡಿಲ್ಲ. ಆದರೆ, ಎನ್‌ಡಿಪಿಪಿ–ಬಿಜೆಪಿ ಮೈತ್ರಿಗೆ ಬೆಂಬಲ ಘೋಷಿಸುವ ಸಾಧ್ಯತೆ ಇದೆ’ ಎಂದು ಎನ್‌ಪಿಎಫ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಅಚುಂಬೆಮೊ ಕೀಕೊನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT