ಕೋಮುಗಲಭೆ ಸೃಷ್ಟಿಸುವ ಉದ್ದೇಶದಿಂದ ನಡೆದ ಪೂರ್ವಯೋಜಿತ ದಾಳಿ ಇದಾಗಿದೆ. ಜನಸಾಮಾನ್ಯರು ಮತ್ತು ಪೊಲೀಸರ ಮೇಲೂ ದಾಳಿ ನಡೆದಿದೆ
ಏಕನಾಥ ಶಿಂದೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ
ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು ಸರ್ಕಾರವೇ. ದೊರೆಯೊಬ್ಬರ ಫೋಟೊವನ್ನು ಸುಟ್ಟು ಹಾಕಲಾಯಿತು. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ
ಅಸಾದುದ್ದೀನ್ ಓವೈಸಿ ಎಐಎಂಐಎಂ ಮುಖ್ಯಸ್ಥ
ನಾಗ್ಪುರ ಹಿಂಸಾಚಾರವು ಪಿತೂರಿಯ ಭಾಗ. ಇದರಲ್ಲಿ ಭಾಗಿಯಾದವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬ ಭರವಸೆ ಇದೆ
ವಿನೋದ್ ಬನ್ಸಾಲ್ ವಿಎಚ್‌ಪಿ ನಾಯಕ
ರಾಜ್ಯದ ಆರ್ಥಿಕ ಸ್ಥಿತಿಗತಿ ಹೆಚ್ಚುತ್ತಿರುವ ಸಾಲ ನಿರುದ್ಯೋಗದ ಕುರಿತ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಹಿಂಸಾಚಾರಕ್ಕೆ ಪ್ರಚೋದನೆ ನೀಡಿ ರಾಜ್ಯದಲ್ಲಿ ಅಸ್ಥಿರತೆ ಸೃಷ್ಟಿಸಲಾಗುತ್ತಿದೆ
ಪ್ರಿಯಾಂಕಾ ಚತುರ್ವೇದಿ ಶಿವಸೇನಾ (ಉದ್ಧವ್ ಬಣ) ಸಂಸದೆ
ಯಾರೊಬ್ಬರ ಸಮಾಧಿಯನ್ನು ಒಡೆಯುವುದು ಅಥವಾ ಅದಕ್ಕೆ ಹಾನಿ ಮಾಡುವುದು ತಪ್ಪು. ಇದು ಸಹೋದರತ್ವ ಶಾಂತಿ ಸಹಬಾಳ್ವೆಯನ್ನು ನಾಶ ಮಾಡುತ್ತದೆ
ಮಾಯಾವತಿ ಬಿಎಸ್‌ಪಿ ಮುಖ್ಯಸ್ಥೆ
ಮಹಾರಾಷ್ಟ್ರ ಸಂಭಾಜಿ ಮಹಾರಾಜ ಅವರಿಗೆ ಸೇರಿದ್ದು. ಇಲ್ಲಿ ಔರಂಗಜೇಬನ ಗುರುತು ಬೇಡ. ಕೆಲವರು ಔರಂಗಜೇಬನನ್ನು ವೈಭವೀಕರಿಸುತ್ತಿದ್ದಾರೆ. ಇದನ್ನು ನಾವು ಸಹಿಸಲ್ಲ