ನವದೆಹಲಿ: ಸಂವಿಧಾನವನ್ನು ಹೊತ್ತು ತಿರುಗುತ್ತಿರುವವರು, ಅಧಿಕಾರದಲ್ಲಿದ್ದಾಗ ಅನ್ಯಾಯ ಮತ್ತು ಪ್ರತಿಗಾಮಿ ಕಾನೂನುಗಳನ್ನು ಪಾಲಿಸುತ್ತಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಬಹುಮತ ಸಾಧಿಸಿದ್ದನ್ನು ವಿರೋಧ ಪಕ್ಷಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
.ಆರೋಗ್ಯದಲ್ಲಿ ಏರುಪೇರು: ಒಡಿಶಾ ಮಾಜಿ ಸಿಎಂ ನವೀನ್ ಪಟ್ನಾಯಕ್ ಆಸ್ಪತ್ರೆಗೆ ದಾಖಲು.ಮೊದಲು ದ್ವಿರಾಷ್ಟ್ರ ಸಿದ್ಧಾಂತ ಪ್ರಚಾರ ಮಾಡಿದ್ದೇ ಸಾವರ್ಕರ್: ಪ್ರಿಯಾಂಕ್ ಖರ್ಗೆ.
ಈಗ ಸಂವಿಧಾನವನ್ನು ಹೊತ್ತು ನೃತ್ಯ ಮಾಡುತ್ತಿರುವ ವಿರೋಧ ಪಕ್ಷದವರು, ಸಂವಿಧಾನ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ವಿಚಾರಗಳಿಗೆ ದ್ರೋಹ ಬಗೆದಿದ್ದಾರೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ದೇಶದಲ್ಲಿ ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವ ನಿಯಮಗಳು ಮತ್ತು ಪ್ರತಿಗಾಮಿ ಕಾನೂನುಗಳನ್ನು ಜಾರಿಗೆ ತಂದಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಸರ್ಕಾರವು ಅಂತಹ ಕಾನೂನುಗಳನ್ನು ಗುರುತಿಸಿ ರದ್ದುಗೊಳಿಸುತ್ತಿದೆ. ಈಗಾಗಲೇ ಅಂತಹ ನೂರಾರು ಕಾನೂನುಗಳನ್ನು ರದ್ದುಗೊಳಿಸಿದೆ ಮತ್ತು ಅದೇ ರೀತಿ ಈ ಪ್ರಕ್ರಿಯೆ ಮುಂದುವರಿದಿದೆ ಎಂದು ಮೋದಿ ಹೇಳಿದ್ದಾರೆ.
.ಚುನಾವಣಾ ಆಯೋಗದ ಅಸಮರ್ಥತೆ, ಪಕ್ಷಪಾತ ಧೋರಣೆ ಬಹಿರಂಗ: ಕಾಂಗ್ರೆಸ್.SIR ಕುರಿತ ಅಪಪ್ರಚಾರ, ಮತಗಳ್ಳತನ ಆರೋಪಗಳಿಗೆ ಹೆದರಲ್ಲ: CEC ಜ್ಞಾನೇಶ್ ಕುಮಾರ್.
ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಪ್ರಸ್ತುತ ಬಿಜೆಪಿ ಸರ್ಕಾರ ಜಾರಿಯಲಿದೆ. ಬಿಜೆಪಿ ಪಕ್ಷ ಮತ್ತು ಅದರ ನಾಯಕತ್ವಕ್ಕೆ ಜನರು ನೀಡಿರುವ ಅಪಾರ ಆಶೀರ್ವಾದವನ್ನು ಈ ಚುನಾವಣೆಗಳು ಪ್ರತಿಬಿಂಬಿಸುತ್ತದೆ. ಆದರೆ ಕೆಲವು ರಾಜಕೀಯ ಪಕ್ಷಗಳಿಗೆ ಜನಾದೇಶವನ್ನು ಇನ್ನೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.

ದೆಹಲಿ ಈಗ ನಕಾರಾತ್ಮಕ ರಾಜಕೀಯದಿಂದ ಮುಕ್ತವಾಗಿದೆ. ದೆಹಲಿ-ಎನ್ಸಿಆರ್ ಅಭಿವೃದ್ಧಿಗೆ ಬಿಜೆಪಿ ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಮೋದಿ ತಿಳಿಸಿದ್ದಾರೆ.
.ಖರ್ಗೆ,ಲಾಲುಗೆ ಕುಡಿಯಲು ನೀರು ಕೊಟ್ಟ ರಾಹುಲ್: ಸಜ್ಜನಿಕೆಯ ವರ್ತನೆ ಎಂದ ನೆಟ್ಟಿಗರು.ಮಹಿಳೆ ಅಳುತ್ತಿದ್ದಳು ಎಂದ ಮಾತ್ರಕ್ಕೆ ವರದಕ್ಷಿಣೆ ಕಿರುಕುಳ ಎನ್ನಲಾಗದು: ಹೈಕೋರ್ಟ್.ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ ₹5 ಲಕ್ಷ: ಯತ್ನಾಳ.ಕಥುವಾ ಮೇಘಸ್ಫೋಟ: ಮೃತರ ಕುಟುಂಬ, ಗಾಯಾಳುಗಳಿಗೆ ಪರಿಹಾರ ಘೋಷಿಸಿದ ಸಿಎಂ ಓಮರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.