ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆಗೆ 10 ಸಾವಿರ ಸಿಬ್ಬಂದಿ ಕೊರತೆ: ಸರ್ಕಾರ

Published 8 ಡಿಸೆಂಬರ್ 2023, 12:38 IST
Last Updated 8 ಡಿಸೆಂಬರ್ 2023, 12:38 IST
ಅಕ್ಷರ ಗಾತ್ರ

ನವದೆಹಲಿ: ಭಾರತ ನೌಕಾಪಡೆಯಲ್ಲಿ ಬರೋಬ್ಬರಿ 10 ಸಾವಿರ ಸಿಬ್ಬಂದಿ ಕೊರತೆಯಿದೆ ಎಂದು ರಕ್ಷಣಾ ಸಚಿವಾಲಯ ಸಂಸತ್‌ನಲ್ಲಿ ಶುಕ್ರವಾರ ತಿಳಿಸಿದೆ. 

1.777 ನೌಕಾಪಡೆ ಅಧಿಕಾರಿಗಳು ಸೇರಿ ಒಟ್ಟು 10,896 ಸಿಬ್ಬಂದಿ ಕೊರತೆಯಿದೆ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ರಕ್ಷಣಾ ಇಲಾಖೆಯ ರಾಜ್ಯಖಾತೆ ಸಚಿವ ಅಜಯ್‌ ಭಟ್‌ ಉತ್ತರಿಸಿದ್ದಾರೆ.

ಅಕ್ಟೋಬರ್ 31 ರವರೆಗೆ ನೌಕಾಪಡೆಯಲ್ಲಿ 9,119 ನಾವಿಕರ ಹುದ್ದೆಗಳು ಖಾಲಿ ಇವೆ ಎಂದು ಹೇಳಿದರು.

ನೌಕಾಪಡೆಯಲ್ಲಿ ಅಧಿಕಾರಿಗಳ ಮತ್ತು ನಾವಿಕರನ್ನು ನೇಮಕ ಮಾಡಿಕೊಳ್ಳುವ ಸಾಮರ್ಥ್ಯ ತಲಾ 11,979 ಮತ್ತು 76,649ರಷ್ಟಿದೆ. 

2021 ರಲ್ಲಿ 323 ಅಧಿಕಾರಿಗಳನ್ನು ಮತ್ತು 2022 ರಲ್ಲಿ 386 ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಅಲ್ಲದೆ 2021 ರಲ್ಲಿ  5,547 ಹಾಗೂ 2022ರಲ್ಲಿ 5,171 ನಾವಿಕರನ್ನು ನೇಮಕ ಮಾಡಲಾಗಿದೆ ಎಂದು ಸಂಸತ್‌ನಲ್ಲಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT