ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಎರಡು ಮುಂಚೂಣಿ ಯುದ್ಧನೌಕೆಗಳು ಮತ್ತು ಡೀಸೆಲ್–ವಿದ್ಯುತ್ ಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನೌಕಾಪಡೆಯಲ್ಲಿ ಜನವರಿ 15ರಂದು ಬಳಕೆಗೆ ನಿಯೋಜಿಸಲಾಗುವುದು.

ಕ್ಷಿಪಣಿ ಧ್ವಂಸಕವಾಗಿರುವ ‘ಸೂರತ್’, ಯುದ್ಧನೌಕೆ ‘ನೀಲಗಿರಿ’, ಜಲಾಂತರ್ಗಾಮಿ ‘ವಾಗ್ಶೀರ್’ –ಈ ಮೂರೂ ವ್ಯವಸ್ಥೆಗಳಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಸಂವೇದಕಗಳನ್ನು ಅಳವಡಿಸಲಾಗಿದೆ ಎಂದೂ ಅಧಿಕಾರಿಗಳು ವಿವರಿಸಿದ್ದಾರೆ.

ಇದೇ ಮೊದಲ ಬಾರಿಗೆ ಏಕಕಾಲದಲ್ಲಿ ಎರಡು ಯುದ್ಧನೌಕೆ, ಒಂದು ಜಲಾಂತರ್ಗಾಮಿ ನೌಕೆಯನ್ನು ಸೇವೆಗೆ ಸಮರ್ಪಿಸಲಾಗುತ್ತಿದೆ. ಇವುಗಳ ಸೇರ್ಪಡೆಯಿಂದ ನೌಕಾಪಡೆ ರಕ್ಷಣಾ ಸಾಮರ್ಥ್ಯಕ್ಕೆ ಹೆಚ್ಚಿನ ಬಲ ಸಿಗಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಯುದ್ಧನೌಕೆ ಮತ್ತು ಜಲಾಂತರ್ಗಾಮಿ ನೌಕೆಯನ್ನು ಮುಂಬೈನಲ್ಲಿರುವ ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಇದು, ಪ್ರಮುಖ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಹೊಂದುವಲ್ಲಿ ಮತ್ತೊಂದು ಹೆಜ್ಜೆಯಾಗಿದೆ ಎಂದು ಹೇಳಿದೆ.

‘ನೀಲಗಿರಿ’ ನೌಕೆಯನ್ನು ಪ್ರಾಜೆಕ್ಟ್ ‘17ಎ’ ಅಡಿ ಅಭಿವೃದ್ಧಿಪಡಿಸಲಾಗಿದೆ. ‘ಸೂರತ್’ ಎಂಬುದು ಪ್ರಾಜೆಕ್ಟ್ ‘15ಬಿ’ಯ 4ನೇ ಮತ್ತು ಅಂತಿಮ ನೌಕೆಯಾಗಿದೆ. ‘ವಾಗ್ಶೀರ್’ ನೌಕೆಯು ಸ್ಕಾರ್ಪೀನ್ ಕ್ಲಾಸ್ ಯೋಜನೆಯ 6ನೇ ಮತ್ತು ಅಂತಿಮ ನೌಕೆಯಾಗಿದೆ ಎಂದು ತಿಳಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ‘ಆತ್ಮನಿರ್ಭರ ಭಾರತ’ ಚಿಂತನೆ ಮತ್ತು ‘ಮೇಕ್ ಇನ್ ಇಂಡಿಯಾ’ ಕಾರ್ಯಕ್ರಮದ ಭಾಗವಾಗಿ ಇವುಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇವುಗಳ ಯಶಸ್ವಿ ಕಾರ್ಯಾಚರಣೆಯು ಯುದ್ಧನೌಕೆಗಳ ವಿನ್ಯಾಸ ಮತ್ತು ನಿರ್ಮಾಣ ಕ್ಷೇತ್ರದಲ್ಲಿನ ಕ್ಷಿಪ್ರಗತಿಯ ಪ್ರಗತಿಗೆ ಕನ್ನಡಿ ಹಿಡಿಯಲಿವೆ ಎಂದು ಹೇಳಿದೆ.

ಮುಂಬೈನಲ್ಲಿರುವ ನೌಕಾನೆಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ, ನೂತನ ಯುದ್ಧನೌಕೆಗಳ ಕಾರ್ಯಾರಂಭಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

ಮುಂಚೂಣಿ ಹೋರಾಟದ ನೆಲೆಯಲ್ಲಿಯೂ ಲಿಂಗಸಮಾನತೆ ಹೊಂದುವ ಭಾರತೀಯ ಸೇನೆಯ ಕ್ರಮದ ಭಾಗವಾಗಿ, ನೂತನ ಎರಡೂ ಯುದ್ಧನೌಕೆಗಳಲ್ಲಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿಗೆ ಪ್ರತ್ಯೇಕ ವಸತಿ ಸೌಲಭ್ಯವಿದೆ ಎಂದು ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.