ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಛತ್ತೀಸಗಢ: ಪೊಲೀಸ್‌ ಮಾಹಿತಿದಾರನೆಂದು ಶಂಕಿಸಿ ಶಿಕ್ಷಕನ ಕೊಂದ ನಕ್ಸಲರು

Published : 15 ಸೆಪ್ಟೆಂಬರ್ 2024, 20:43 IST
Last Updated : 15 ಸೆಪ್ಟೆಂಬರ್ 2024, 20:43 IST
ಫಾಲೋ ಮಾಡಿ
Comments

ಸುಕ್ಮಾ: ಪೊಲೀಸ್‌ ಮಾಹಿತಿದಾರನೆಂದು ಶಂಕಿಸಿ 25 ವರ್ಷದ ಅರೆಕಾಲಿಕ ಶಿಕ್ಷಕರೊಬ್ಬರನ್ನು ನಕ್ಸಲರು ಹತ್ಯೆ ಮಾಡಿರುವ ಘಟನೆ ಛತ್ತೀಸಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಜಾಗರಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಗೊಂಡಪಲ್ಲಿ ಗ್ರಾಮದಲ್ಲಿ ಅರೆಕಾಲಿಕ ಅತಿಥಿ ಶಿಕ್ಷಕ (ಶಿಕ್ಷಾ ದೂತ್‌) ದೋಡಿ ಅರ್ಜುನ್ ಅವರನ್ನು ನಕ್ಸಲರು ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಿಕ್ಷಕನ ಹತ್ಯೆಯ ಮಾಹಿತಿ ಸಿಕ್ಕಿದ ತಕ್ಷಣ ಪೊಲೀಸರ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ನಕ್ಸಲರ ಪತ್ತೆಗೆ ಭದ್ರತಾ ಸಿಬ್ಬಂದಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಅರ್ಜುನ್ ಅವರು ನಕ್ಸಲರ ಭದ್ರಕೋಟೆಯಾಗಿರುವ ಜಾಗರಗುಂದ ಪ್ರದೇಶದ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಕ್ಸಲರ ಬೆದರಿಕೆಯಿಂದ ಹಲವಾರು ವರ್ಷಗಳಿಂದ ಮುಚ್ಚಿದ್ದ ಶಾಲೆಗಳನ್ನು ಪುನಃ ತೆರೆಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ತಿಳಿಸಿದ್ದಾರೆ. 

ನಕ್ಸಲರು ಬಸ್ತಾರ್‌ನಲ್ಲಿ ನೆಲೆ ಕಳೆದುಕೊಳ್ಳುತ್ತಿದ್ದಾರೆ. ಈ ವರ್ಷ ನಕ್ಸಲ್‌ ನಿಗ್ರಹ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿರುವುದರಿಂದ ನಕ್ಸಲರು ಭಾರಿ ನಷ್ಟ ಅನುಭವಿಸಿದ್ದಾರೆ. ಹೀಗಾಗಿ ಹತಾಶೆಯಿಂದ ಅವರು ಜನರನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT