ಲಖನೌ: ‘ಹೊಸ ವರ್ಷಾಚರಣೆಯು ಇಸ್ಲಾಂ ವಿರೋಧಿ ಮತ್ತು ಶರಿಯತ್ಗೆ (ಇಸ್ಲಾಮಿಕ್ ಕಾನೂನುಗಳು) ವಿರುದ್ಧವಾಗಿದ್ದು, ಮುಸ್ಲಿಮರು ಈ ಆಚರಣೆಯಲ್ಲಿ ಭಾಗವಹಿಸಬಾರದು’ ಎಂದು ಅಖಿಲ ಭಾರತ ಮುಸ್ಲಿಂ ಜಮಾತ್ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಶಹಬುದ್ದೀನ್ ರಜ್ವಿ ಅವರು ‘ಫತ್ವಾ’ ಹೊರಡಿಸಿದ್ದಾರೆ.

ಸೋಮವಾರ ವಿಡಿಯೊ ಬಿಡುಗಡೆ ಮಾಡಿರುವ ಅವರು, ‘ಮುಸ್ಲಿಮರು ಹೊಸ ವರ್ಷಾಚರಣೆಯ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಹಾಗೂ ಹಾಜರಾಗಬಾರದು’ ಎಂದು ಹೇಳಿದ್ದಾರೆ.

‘ಈ ಆಚರಣೆಗಳು ಇಸ್ಲಾಮಿಕ್ ಕಾನೂನುಗಳಿಗೆ ಅನುಗುಣವಾಗಿವೆಯೇ’ ಎಂದು ಸಮುದಾಯದ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧರ್ಮಗುರು, ‘ಹೊಸ ವರ್ಷದ ಆಚರಣೆಗಳು ಶರಿಯತ್ ದೃಷ್ಟಿಯಲ್ಲಿ ಕಾನೂನುಬಾಹಿರ’ ಎಂದಿದ್ದಾರೆ.

ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ಹೊಸ ವರ್ಷವು ಮೊಹರಂ ತಿಂಗಳಿನಿಂದ ಪ್ರಾರಂಭವಾಗುತ್ತದೆ. ಹಿಂದೂ ಹೊಸ ವರ್ಷವು ಚೈತ್ರ ಮಾಸದಿಂದ ಪ್ರಾರಂಭವಾಗುತ್ತದೆ. ಡಿಸೆಂಬರ್ 31 ಅಥವಾ ಜನವರಿ 1ರಂದು ಹೊಸ ವರ್ಷವನ್ನು ಆಚರಿಸುವುದು ಪಾಶ್ಚಿಮಾತ್ಯ ಸಂಸ್ಕೃತಿಯ ಭಾಗವಾಗಿದೆ. ಅದು ಭಾರತೀಯ ಸಂಸ್ಕೃತಿಯಲ್ಲ’ ಎಂದು ಹೇಳಿದ್ದಾರೆ.

‘ಹೊಸ ವರ್ಷದ ಆಚರಣೆಗಳಲ್ಲಿ ಭಾಗವಹಿಸುವವರ ವಿರುದ್ಧ ಮುಸ್ಲಿಂ ಧರ್ಮಗುರುಗಳು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.