ನವದೆಹಲಿ: ಚೀನಾ ಪರ ಪ್ರಚಾರ ಮಾಡಲು ಸುದ್ದಿ ಪೋರ್ಟಲ್‌ಗೆ ಹಣ ಪಡೆದ ಆರೋಪದ ಮೇಲೆ ಭಯೋತ್ಪಾದನೆ ನಿಗ್ರಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ದಾಖಲಾಗಿರುವ ಪ್ರಕರಣದಲ್ಲಿ ‘ನ್ಯೂಸ್‌ಕ್ಲಿಕ್’ ಸುದ್ದಿ ಸಂಸ್ಥೆಯ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಮತ್ತು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯ ಫೆಬ್ರುವರಿ 17ರವರೆಗೆ ವಿಸ್ತರಿಸಿದೆ.

ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ದೀಪ್ ಕೌರ್ ಅವರು ಈ ಕುರಿತು ಸೋಮವಾರ ಆದೇಶಿಸಿದರು. ಪ್ರಬೀರ್ ಪುರಕಾಯಸ್ಥ ಪ್ರಕರಣದ ಆರೋಪಿಯಾಗಿದ್ದರೆ, ಚಕ್ರವರ್ತಿ ಅವರು ಸರ್ಕಾರದ ಪರ ಸಾಕ್ಷಿದಾರರಾಗಿ ಪರಿವರ್ತಿತರಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಅಕ್ಟೋಬರ್ 3ರಂದು ಇಬ್ಬರನ್ನೂ ಬಂಧಿಸಿದ್ದರು. ಕಳೆದ ತಿಂಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಚಕ್ರವರ್ತಿ ಅವರು, ಪ್ರಕರಣದಲ್ಲಿ ಸರ್ಕಾರದ ಪರ ಸಾಕ್ಷ್ಯ ಹೇಳುವುದಾಗಿ ಕೋರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಸಾಂದರ್ಭಿಕ ಸಾಕ್ಷ್ಯಗಳಿದ್ದು, ಇವುಗಳನ್ನು ದೆಹಲಿ ಪೊಲೀಸರ ಎದುರು ಬಹಿರಂಗಪಡಿಸಲು ಸಿದ್ಧವಿರುವುದಾಗಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.