ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲಮೂಲ ರಕ್ಷಣೆಗೆ ನೋಡಲ್‌ ಸಂಸ್ಥೆ ಸ್ಥಾಪಿಸಿ’

ರಾಜ್ಯಗಳಿಗೆ ಹಸಿರು ನ್ಯಾಯಮಂಡಳಿ ನಿರ್ದೇಶನ: ಈವರೆಗಿನ ಕ್ರಮಗಳ ಬಗ್ಗೆ ಅತೃಪ್ತಿ
Last Updated 22 ನವೆಂಬರ್ 2020, 20:28 IST
ಅಕ್ಷರ ಗಾತ್ರ

ನವದೆಹಲಿ: ಜಲಮೂಲಗಳ ರಕ್ಷಣೆಗೆ ನೋಡಲ್‌ ಸಂಸ್ಥೆಯೊಂದನ್ನು ನಿಯೋಜಿಸಬೇಕು ಎಂದು ರಾಷ್ಟ್ರೀಯ ಹಸಿರು ಪೀಠವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ.

ಜಲಮೂಲಗಳ ರಕ್ಷಣೆಗೆ ಬೇಕಾದಷ್ಟು ಕೆಲಸಗಳನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಮಾಡಿಲ್ಲ ಎಂದು ಹಸಿರು ನ್ಯಾಯಮಂಡಳಿಯ ಪ್ರಧಾನ ಪೀಠದ ಮುಖ್ಯಸ್ಥ ನ್ಯಾಯಮೂರ್ತಿ ಎ.ಕೆ. ಗೋಯಲ್‌ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

ಜಲಮೂಲಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆಯನ್ನು ನೋಡಲ್‌ ಸಂಸ್ಥೆಯು ರೂಪಿಸಬೇಕು. ಜತೆಗೆ, ದೂರು ಪರಿಹಾರ ವ್ಯವಸ್ಥೆಯನ್ನೂ ಸ್ಥಾಪಿಸಬೇಕು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಕೇಂದ್ರ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿಗೆ ನಿಯಮಿತವಾಗಿ ವರದಿ ಸಲ್ಲಿಸಬೇಕು. ಪಂಚಾಯಿತಿ ಮಟ್ಟದ ವರೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ನೋಡಲ್ ಸಂಸ್ಥೆಯು ನಿರ್ದೇಶನಗಳನ್ನು ನೀಡಬೇಕುಎಂದು ಪೀಠವು ಸೂಚಿಸಿದೆ.

ಗುರುಗ್ರಾಮದಲ್ಲಿರುವ ಘಠಾ ಸರೋವರ ಮತ್ತು ಫರೀದಾಬಾದ್‌ ಜಿಲ್ಲೆಯಲ್ಲಿನ 214 ಜಲಮೂಲಗಳನ್ನು ನವೀಕರಿಸಬೇಕು ಎಂದು ಕೋರಿ ನಿವೃತ್ತ ಲೆ. ಕರ್ನಲ್‌ ಸರ್ವದಮನ್‌ ಸಿಂಗ್‌ ಒಬೆರಾಯ್‌ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ಈ ನಿರ್ದೇಶನ ನೀಡಲಾಗಿದೆ. ಹಸಿರು ಪೀಠವು ಅರ್ಜಿಯ ವ್ಯಾಪ್ತಿಯನ್ನು ಇಡೀ ದೇಶಕ್ಕೆ ವಿಸ್ತರಿಸಿದೆ.

ಮಲಿನಗೊಂಡಿರುವ 351 ನದಿ ಪ್ರದೇಶಗಳ ಪುನಶ್ಚೇತನಕ್ಕಾಗಿ ರೂಪಿಸಲಾಗಿರುವ ಕೇಂದ್ರ ನಿಗಾ ಸಮಿತಿಯುಜಲಮೂಲಗಳ ಸಂರಕ್ಷಣೆಗಾಗಿ ರಾಜ್ಯಗಳು ನಡೆಸುವ ಪ್ರಯತ್ನಗಳನ್ನು ಪರಿಶೀಲಿಸಬೇಕು. ವರ್ಷದಲ್ಲಿ ಕನಿಷ್ಠ ಮೂರು ಬಾರಿ ಪರಿಶೀಲನೆ ಆಗಬೇಕು ಎಂದು ನ್ಯಾಯಮಂಡಳಿಯು ಸೂಚಿಸಿದೆ. ಇಂತಹ ಮೊದಲ ಸಭೆಯು 2021ರ ಮಾರ್ಚ್‌ 31ರೊಳಗೆ ನಡೆಯಬೇಕು ಎಂದೂ ಹೇಳಿದೆ.

ಜಲಮೂಲಗಳಿಗೆ ಸಂಬಂಧಿಸಿದ ದೂರುಗಳು ಮೊದಲಿಗೆ ದೂರು ಪರಿಹಾರ ಸಮಿತಿಯ ಮುಂದೆ ಅಥವಾ ಸಂಬಂಧಪಟ್ಟ ಜಿಲ್ಲಾಧಿಕಾರಿಯ ಮುಂದೆ ಬರಬೇಕು ಎಂದು ಸೂಚಿಸಲಾಗಿದೆ.

‘ಈವರೆಗೆ ಕೈಗೊಂಡಿರುವ ಕ್ರಮಗಳು ಎಲ್ಲಿಗೂ ಸಾಲುವುದಿಲ್ಲ.ಜಲಮೂಲಗಳ ರಕ್ಷಣೆಯಿಂದ ಪ್ರಕೃತಿ ಸೌಂದರ್ಯ ವೃದ್ಧಿಸುವುದರ ಜತೆಗೆ ನೀರಿನ ಲಭ್ಯತೆ, ಜಲಜೀವಿಗಳ ರಕ್ಷಣೆ, ಅಂತರ್ಜಲ ಮರುಪೂರಣ ಮತ್ತು ನದಿಗಳ ಹರಿವಿಗೆ ನೆರವು ದೊರೆಯುತ್ತದೆ’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT