ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತಮಿಳುನಾಡು: ರಾಜಭವನ ಬಳಿ ಪೆಟ್ರೋಲ್ ಬಾಂಬ್ ಸ್ಫೋಟ: ಆರೋಪಪಟ್ಟಿ ಸಲ್ಲಿಸಿದ ಎನ್‌ಐಎ

Published 20 ಜನವರಿ 2024, 13:16 IST
Last Updated 20 ಜನವರಿ 2024, 13:16 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ರಾಜಭವನದ ಗೇಟ್‌ಗೆ ಪೆಟ್ರೋಲ್‌ ಬಾಂಬ್‌ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್‌ಐಎ) ವ್ಯಕ್ತಿಯೊಬ್ಬರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ವಿನೋತ್ ಅಲಿಯಾಸ್‌ ಕರುಕ್ಕಾ ವಿನೋತ್ ವಿರುದ್ಧ ಚೆನ್ನೈನ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ಶುಕ್ರವಾರ ಆರೋಪಪಟ್ಟಿ  ಸಲ್ಲಿಸಿದೆ. ಐಪಿಸಿ ಸೆಕ್ಷನ್ 124 ರಡಿ ಪ್ರಕರಣ ದಾಖಲಿಸಲಾಗಿದೆ. ರಾಷ್ಟ್ರಪತಿ, ರಾಜ್ಯಪಾಲರ ಮೇಲೆ ನಡೆಸುವ ಹಲ್ಲೆಗೆ ಸಂಬಂಧಿಸಿದ ಸೆಕ್ಷನ್ ಇದಾಗಿದೆ ಎಂದು ಹೇಳಿದ್ದಾರೆ.

ತಮಿಳುನಾಡು ರಾಜಭವನದ ಗೇಟ್‌ ನಂಬರ್‌ 1ರ ಬಳಿ ಆರೋಪಿಯು ಕಳೆದ ವರ್ಷ ಅ. 25ರಂದು ಎರಡು ಪೆಟ್ರೋಲ್‌ ಬಾಂಬ್ ಎಸೆದಿದ್ದ ಎನ್ನಲಾಗಿದೆ. 

‘ಆರೋಪಿಯು ರಾಜಭವನದ ಗೇಟ್‌ಗೆ ಪೆಟ್ರೋಲ್‌ ಬಾಂಬ್‌ ಎಸೆದಿದ್ದು ನಾಲ್ಕನೇ ಘಟನೆ. ಈ ಹಿಂದೆ ಈತ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ ಔಟ್‌ಲೆಟ್‌, ತೇನಂಪೇಟ್‌ ಪೊಲೀಸ್ ಠಾಣೆ ಹಾಗೂ ಬಿಜೆಪಿ ಕಚೇರಿ ಮೇಲೆಯೂ ಪೆಟ್ರೋಲ್ ಬಾಂಬ್ ಎಸೆದಿದ್ದ’ ಎಂದು ಎನ್‌ಐಎ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT