ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ ಚಟುವಟಿಕೆ: ಮಾಹಿತಿ ನೀಡಲು ಸಾರ್ವಜನಿಕರಿಗೆ ಎನ್‌ಐಎ ಮನವಿ

ಸಾಮಾಜಿಕ ಜಾಲತಾಣ ಬಳಕೆ; ಮೋಸದ ಜಾಲಕ್ಕೆ ಬೀಳುವ ಯುವಕರು
Last Updated 17 ಸೆಪ್ಟೆಂಬರ್ 2021, 18:05 IST
ಅಕ್ಷರ ಗಾತ್ರ

ನವದೆಹಲಿ: ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಪರವಾಗಿ ಉಗ್ರವಾದಿ ಚಟುವಟಿಕೆ ಮತ್ತು ನೇಮಕಾತಿ ಪ್ರಯತ್ನಗಳ ಬಗ್ಗೆ ಮಾಹಿತಿ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ಐಎ) ಸಾರ್ವಜನಿಕರಿಗೆ ಮನವಿ ಮಾಡಿದೆ.

ಆನ್‌ಲೈನ್‌ನಲ್ಲಿ ನಿರಂತರ ಪ್ರಚಾರದ ಮೂಲಕ ಐಎಸ್ ತನ್ನ ಕಾರ್ಯಸೂಚಿಯನ್ನು ಭಾರತದಲ್ಲಿ ಹರಡಲು ಪ್ರಯತ್ನಿಸುತ್ತಿದೆ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಎನ್ಐಎ ತಿಳಿಸಿದೆ.

ಭಾರತದಲ್ಲಿ ಐಎಸ್ ಚಟುವಟಿಕೆ ಗಳ ಬಗ್ಗೆ ಯಾವುದೇ ಮಾಹಿತಿ ಇರುವವರು 011-24368800ಗೆ ಸಂಪರ್ಕಿಸಿ ಎಂದು ಎನ್ಐಎ ತಿಳಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಮೋಸದ ಜಾಲಕ್ಕೆ ಬೀಳುವ ಯುವಕರನ್ನು ಗುರಿಯಾಗಿಸ ಲಾಗುತ್ತಿದೆ. ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಮುಕ್ತ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಒಬ್ಬ ವ್ಯಕ್ತಿಯು ಒಮ್ಮೆ ಆಸಕ್ತಿ ತೋರಿಸಿದರೆ, ಆ ವ್ಯಕ್ತಿಯ ಜೊತೆ ವಿದೇಶದಲ್ಲಿರುವ ಆನ್‌ಲೈನ್ ಹ್ಯಾಂಡ್ಲರ್‌ಗಳು ಗೂಢಲಿಪಿ ವೇದಿಕೆಗಳ ಮೂಲಕ ಸಂವಹನ ನಡೆಸುತ್ತಾರೆ ಎಂದು ಎನ್‌ಐಎ ಹೇಳಿದೆ.

ವ್ಯಕ್ತಿಯ ವಿಶ್ವಾಸಾರ್ಹತೆಗೆ ಅನುಗುಣವಾಗಿ ಕೆಲಸಗಳನ್ನು ನೀಡಲಾಗು ತ್ತದೆ. ಆನ್‌ಲೈನ್ ವಿಷಯವನ್ನು ಅಪ್‌ಲೋಡ್ ಮಾಡುವುದು, ಸ್ಥಳೀಯ ಭಾಷೆಗೆ ಐಎಸ್ ಪಠ್ಯಗಳನ್ನು ಅನುವಾದ ಮಾಡುವುದು, ಪಿತೂರಿ ಮಾಡುವುದು, ಮಾಡ್ಯೂಲ್ ತಯಾರಿಕೆ, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹ, ಸ್ಫೋಟಕ ತಯಾರಿಕೆ, ಭಯೋತ್ಪಾದನಾ ಚಟುವಟಿಕೆಗಳಿಗೆ ನಿಧಿ ಸಂಗ್ರಹ ಮತ್ತು ಭಯೋತ್ಪಾದಕ ದಾಳಿಗಳನ್ನು ನಡೆಸಲು ಅವರನ್ನು ಬಳಸಿಕೊಳ್ಳಲಾಗುತ್ತದೆ.

ಇಲ್ಲಿಯವರೆಗೆ ಎನ್ಐಎ ತನಿಖೆ ನಡೆಸಿದ 37 ಭಯೋತ್ಪಾದಕ ದಾಳಿ ಪ್ರಕರಣಗಳಲ್ಲಿ ದಾಳಿಯ ಹಿಂದೆ ಐಎಸ್ ಸಿದ್ಧಾಂತ ಪ್ರೇರಣೆಯಾಗಿದೆ. ಈ ಪ್ರಕರಣಗಳಲ್ಲಿ ಒಟ್ಟು 168 ಆರೋಪಿಗಳನ್ನು ಬಂಧಿಸಲಾಗಿದೆ. 31 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ವಿಚಾರಣೆಯ ನಂತರ 27 ಆರೋಪಿಗಳನ್ನು ಶಿಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT