ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಮಿ ಕವಿ ನೀಲಮಣಿ ಫೂಕನ್‌ ಮತ್ತು ಕೊಂಕಣಿ ಸಾಹಿತಿ ದಾಮೋದರ ಮೌಜೋಗೆ ಜ್ಞಾನಪೀಠ

2020, 2021ನೇ ಸಾಲಿನ ಪ್ರಶಸ್ತಿ ಪ್ರಕಟ
Last Updated 7 ಡಿಸೆಂಬರ್ 2021, 19:33 IST
ಅಕ್ಷರ ಗಾತ್ರ

ನವದೆಹಲಿ:ಅಸ್ಸಾಮಿ ಕವಿ ನೀಲಮಣಿ ಫೂಕನ್‌ ಮತ್ತು ಕೊಂಕಣಿ ಸಾಹಿತಿ ದಾಮೋದರ ಮೌಜೋ ಅವರಿಗೆ ಕ್ರಮವಾಗಿ 56 ಮತ್ತು 57ನೇ ಜ್ಞಾನಪೀಠ ಪ್ರಶಸ್ತಿ ಸಂದಿದೆ. ಫೂಕನ್ ಅವರು 2020ರ ಸಾಲಿನ ಜ್ಞಾನಪೀಠ ಪ್ರಶಸ್ತಿಗೆಭಾಜನರಾಗಿದ್ದರೆ, ಮೌಜೋ ಅವರನ್ನು2021ನೇ ಸಾಲಿನಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

1933ರಲ್ಲಿಅಸ್ಸಾಂನ ದೇರ್ಗಾಂವ್‌ ನಲ್ಲಿ ಜನಿಸಿದ ಫೂಕನ್ ಅವರು, ಅಸ್ಸಾಂ ಸಾಹಿತ್ಯಕ್ಕೆ ಫ್ರೆಂಚ್ ಪ್ರತಿಮಾ ಸಿದ್ಧಾಂತಆಧಾರಿತ ಆಧುನಿಕತೆಯನ್ನು ತಂದುಕೊಟ್ಟರು. ಇದು ಅಸ್ಸಾಮಿ ಭಾಷೆಗೆ ಸಂದಿರುವ ಮೂರನೇ ಜ್ಞಾನಪೀಠ ಪ್ರಶಸ್ತಿ.

1944ರಲ್ಲಿಗೋವಾದಲ್ಲಿ ಜನಿಸಿದ ದಾಮೋದರ ಮೌಜೋ ಅವರು ತಮ್ಮ ಸಣ್ಣ ಕತೆಗಳು ಮತ್ತು ಕಾದಂಬರಿಗಳಿಗೆ ಪ್ರಸಿದ್ಧರು. ಇದು ಕೊಂಕಣಿ ಭಾಷೆಗೆ ಸಂದಿರುವ ಎರಡನೇ ಜ್ಞಾನಪೀಠ.
ಜಿ.ಎನ್. ದೇವಿ, ಎಂ.ಎಂ. ಕಲಬುರ್ಗಿ ಮೊದಲಾದವರೊಡನೆ ಮೌಜೋ ಕೆಲಸ ಮಾಡಿದ್ದಾರೆ. ಕಲಬುರ್ಗಿ ಅವರ ಸಂಪಾದಕತ್ವದ ‘ವಚನ ಸಂಪುಟ’ವನ್ನು ಕೊಂಕಣಿ ಭಾಷೆಗೆ ಅನುವಾದ ಮಾಡಿದ ತಂಡದ ಮುಖ್ಯಸ್ಥರಾಗಿದ್ದರು. ಜಿ.ಎನ್. ದೇವಿ ಅವರ ಜತೆ ಭಾಷಾಶಾಸ್ತ್ರಕ್ಕೆ ಸಂಬಂಧಿಸಿ ಕೆಲಸ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT