ಶಿಯೋಪುರ್: ದಕ್ಷಿಣ ಆಫ್ರಿಕಾದಿಂದ 9 ಚೀತಾಗಳನ್ನು ಮಧ್ಯ ಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಶನಿವಾರ ತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಚೀತಾಗಳನ್ನು ಭಾರತೀಯ ವಾಯುಪಡೆ ವಿಮಾನದಲ್ಲಿ ಉದ್ಯಾನಕ್ಕೆ ತರಲಾಗಿದ್ದು, ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಆರು ಹೆಣ್ಣು ಚೀತಾಗಳು ಮತ್ತು ಮೂರು ಗಂಡು ಚೀತಾಗಳನ್ನು ಉದ್ಯಾನದಲ್ಲಿರುವ ಕ್ವಾರಂಟೈನ್ ಪ್ರದೇಶಕ್ಕೆ ಬಿಟ್ಟರು ಎಂದು ಅಧಿಕಾರಿ ಎಲ್ ಕೃಷ್ಣಮೂರ್ತಿ ತಿಳಿಸಿದರು.

ಆಫ್ರಿಕಾದಿಂದ ಭಾರತಕ್ಕೆ ತರಲಾದ ಚೀತಾಗಳ ಮೂರನೇ ಬ್ಯಾಚ್ ಇದಾಗಿದ್ದು, ಈ ಮೂಲಕ ಭಾರತದಲ್ಲಿರುವ ಚೀತಾಗಳ ಸಂಖ್ಯೆಯು 48ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ 2023ರಿಂದ ಈವರೆಗೆ 39 ಚೀತಾ ಮರಿಗಳು ಜನಿಸಿದ್ದು, 27 ಮರಿಗಳು ಬದುಕುಳಿದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.