ತಿರುವನಂತಪುರ: ಕೇರಳದ ಮಲಪ್ಪುರಂ ಜಿಲ್ಲೆಯ 42 ವರ್ಷದ ಮಹಿಳೆಯೊಬ್ಬರಿಗೆ ನಿಫಾ ವೈರಸ್ ತಗುಲಿರುವುದು ದೃಢವಾಗಿದೆ. ಸೋಂಕಿತ ಮಹಿಳೆಗೆ ಪೆರಿಂಥಲಮಣ್ಣ ಪಟ್ಟಣದಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಫಾ ವೈರಸ್ ಮತ್ತಷ್ಟು ಮಂದಿಗೆ ಹರಡದಂತೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ತಿಳಿಸಿದರು.

ಕಳೆದ ವರ್ಷ ನಿಫಾ ವೈರಸ್ ತಗುಲಿದ್ದ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ಮತ್ತು ಬೆಂಗಳೂರಿನಲ್ಲಿ ಓದುತ್ತಿದ್ದ ಮಲಪ್ಪುರಂ ಜಿಲ್ಲೆಯ 24 ವರ್ಷದ ಯುವಕ ನಿಫಾ ಸೋಂಕಿನಿಂದ ಮೃತಪಟ್ಟಿದ್ದರು.

2018ರಲ್ಲಿ ಕೋಯಿಕೋಡ್ನಲ್ಲಿ ಈ ವೈರಸ್ನಿಂದಾಗಿ 20 ಮಂದಿ ಮೃತಪಟ್ಟಿದ್ದರು. 2019ರಲ್ಲಿ ಒಬ್ಬರಿಗೆ ಮಾತ್ರ ವೈರಸ್ ತಗುಲಿತ್ತು ಮತ್ತು ಅವರು ಗುಣಮಮುಖರಾಗಿದ್ದರು.
.ಬೆಂಗಳೂರು | ನಿಫಾ: 41 ಮಂದಿ ಮೇಲೆ ನಿಗಾ.ಬೆಂಗಳೂರಿನಿಂದ ಕೇರಳಕ್ಕೆ ಬಂದಿದ್ದ ವ್ಯಕ್ತಿ ನಿಫಾ ವೈರಸ್ನಿಂದ ಸಾವು: ವೀಣಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.