ನವದೆಹಲಿ: ಸಲಿಂಗಕಾಮ ಹಾಗೂ ಗುದಸಂಭೋಗವನ್ನು ಅಸಹಜ ಲೈಂಗಿಕ ಅಪರಾಧವನ್ನಾಗಿ ಕಾಣುವ ಪಠ್ಯವನ್ನು ‘ವಿಧಿವಿಜ್ಞಾನ ಹಾಗೂ ಟಾಕ್ಸಿಕಾಲಜಿ’ ವಿಷಯದಲ್ಲಿ ಮರು ಸೇರ್ಪಡೆ ಮಾಡುವ ಮಾರ್ಗಸೂಚಿಯನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಗುರುವಾರ ಹಿಂಪಡೆದಿದೆ.
ವೈದ್ಯಕೀಯ ಪದವಿ ತರಗತಿಗಳ ಪಠ್ಯದಲ್ಲಿನ ಬದಲಾವಣೆಗೆ ಸಂಬಂಧಿಸಿದಂತೆ ಆಗಸ್ಟ್ 31ರಂದು ಮಾರ್ಗಸೂಚಿ ಹೊರಡಿಸಲಾಗಿತ್ತು.
ಸಾರ್ವಜನಿಕರಿಂದ ಈ ಮಾರ್ಗಸೂಚಿಗೆ ಪ್ರತಿರೋಧ ವ್ಯಕ್ತವಾದ ಕಾರಣಕ್ಕೆ ಎನ್‌ಎಂಸಿ ಮಾರ್ಗಸೂಚಿಯನ್ನು ವಾಪಸ್ ಪಡೆದಿದೆ. ಅದರ ಪ್ರಕಟಣೆಯು ಈ ವಿಷಯವನ್ನು ಸ್ಪಷ್ಟಪಡಿಸಿದೆ.