ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇಂಡಿಯಾ’ದೊಂದಿಗೆ ಮೈತ್ರಿ ಯೋಚನೆ ಇಲ್ಲ: ಪ್ರಕಾಶ್‌ ಅಂಬೇಡ್ಕರ್‌

Published 20 ಆಗಸ್ಟ್ 2023, 7:02 IST
Last Updated 20 ಆಗಸ್ಟ್ 2023, 7:02 IST
ಅಕ್ಷರ ಗಾತ್ರ

ನವದೆಹಲಿ: ಯಾವ ಪಾರಿವಾಳವೂ ಬಂದಿಲ್ಲ, ಫೋನ್ ಕರೆಯೂ ಬಂದಿಲ್ಲ... ಎನ್ನುವ ಮೂಲಕ 2024 ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಪ್ರತಿಪಕ್ಷಗಳ I.N.D.I.A ಮೈತ್ರಿ ಕೂಟಕ್ಕೆ ಸೇರಲು ಕಾಂಗ್ರೆಸ್‌ ನಾಯಕರು ಸಂಪರ್ಕಿಸಿದ್ದರು ಎಂಬ ವರದಿಗಳನ್ನು ‘ವಂಚಿತ ಬಹುಜನ ಅಘಾಡಿ’ ಪಕ್ಷದ ಸ್ಥಾಪಕ ಪ್ರಕಾಶ್‌ ಅಂಬೇಡ್ಕರ್‌ ತಳ್ಳಿಹಾಕಿದ್ದಾರೆ.

ಅಲ್ಲದೆ ಕೂಟಕ್ಕೆ ಸೇರಲು ಸಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ ಎನ್ನುವುದು ಸುಳ್ಳು, I.N.D.I.A ಕೂಟದೊಂದಿಗೆ ಮೈತ್ರಿ ಮಾಡಿಕೊಳ್ಳುವ ಯಾವುದೇ ಯೋಚನೆ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇದು ಕಾಂಗ್ರೆಸ್‌ನ ಪೇಟೆಂಟ್ ವಿಧಾನವಾಗಿದೆ. ಸರಿಯಾದ ರೀತಿಯ ಸಂವಹನ ನಡೆಸದೆ ಎಲ್ಲೆಡೆ ಹೇಳಿಕೊಂಡು ಬಂದರೆ ಇದೇ ರೀತಿ ಆಗುತ್ತದೆ ಎಂದು ಪ್ರಕಾಶ್‌ ಅಂಬೇಡ್ಕರ್ ಹೇಳಿದ್ದಾರೆ.

ಮುಂಬೈ ಮೂಲದ ಪ್ರಕಾಶ್‌ ಅಂಬೇಡ್ಕರ್‌ ಅವರು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಮೊಮ್ಮಗ. ಇವರು ವಕೀಲರು ಕೂಡ ಹೌದು. ಎರಡು ಬಾರಿ ಅಕೊಲಾ ಪ್ರದೇಶದಿಂದ ಸಂಸದರಾಗಿ ಲೋಕಸಭೆಗೆ ಹಾಗೂ ಒಂದು ಬಾರಿ ರಾಜ್ಯ ಸಭಾ ಸಂಸದರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT