ರಾಷ್ಟ್ರವ್ಯಾಪಿ ಜಾತಿ ಗಣತಿಗೆ ಆಗ್ರಹಿಸಿ ಪ್ರಯಾಗರಾಜ್‌ನಲ್ಲಿ ನಡೆದ ‘ಸಂವಿಧಾನ ಸಮ್ಮಾನ್ ಸಮ್ಮೇಳನ’ದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
‘ಮಿಸ್ ಇಂಡಿಯಾ ಪಟ್ಟಿಯನ್ನು ಪರಿಶೀಲಿಸಿದ್ದೇನೆ. ಅದರಲ್ಲಿ ದಲಿತ, ಬುಡಕಟ್ಟು ಅಥವಾ ಒಬಿಸಿಯ ಯಾರೊಬ್ಬ ಮಹಿಳೆಯು ಇಲ್ಲ. ಕೆಲವರು ಕ್ರಿಕೆಟ್ ಮತ್ತು ಬಾಲಿವುಡ್ ಬಗ್ಗೆ ಮಾತನಾಡುತ್ತಾರೆ. ಆದರೆ, ಯಾರೂ ಕೂಡ ಚಮ್ಮಾರ ಅಥವಾ ಪ್ಲಂಬರ್ ಬಗ್ಗೆ ತೋರಿಸುವುದಿಲ್ಲ. ಅಲ್ಲದೆ, ಮಾಧ್ಯಮಗಳಲ್ಲಿ ಉನ್ನತ ನಿರೂಪಕರು ಸಹ ಈ ಸಮುದಾಯಗಳವರಲ್ಲ’ ಎಂದು ಹೇಳಿದ್ದಾರೆ.
ದೇಶದಲ್ಲಿ ಶೇ 90ರಷ್ಟಿರುವ ಈ ಸಮುದಾಯಗಳ ಜನರ ಭಾಗವಹಿಸುವಿಕೆ ಇಲ್ಲದೆ ದೇಶ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಾಧ್ಯಮಗಳ ಮುಖ್ಯವಾಹಿನಿಗಳ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, ‘ಪ್ರಧಾನಿ ಮೋದಿ ಯಾರನ್ನಾದರೂ ತಬ್ಬಿಕೊಂಡರೆ, ನಾವು ಮಹಾಶಕ್ತಿಯಾಗಿದ್ದೇವೆ ಎಂದು ಹೇಳುತ್ತಾರೆ. ದೇಶದ ಶೇ 90ರಷ್ಟು ಜನರು ಭಾಗವಹಿಸದಿರುವಾಗ ನಾವು ಮಹಾಶಕ್ತಿ ಹೇಗೆ ಆಗಿದ್ದೇವೆ? ಎಂದು ಪ್ರಶ್ನಿಸಿದ್ದಾರೆ.