ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆ | 3 ತಿಂಗಳ ಕಾಲ ‘ಮನ್‌ ಕೀ ಬಾತ್‌’ ಪ್ರಸಾರವಿಲ್ಲ: ಪ್ರಧಾನಿ ಮೋದಿ

Published 25 ಫೆಬ್ರುವರಿ 2024, 7:26 IST
Last Updated 25 ಫೆಬ್ರುವರಿ 2024, 7:26 IST
ಅಕ್ಷರ ಗಾತ್ರ

ನವದೆಹಲಿ: ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಮುಂದಿನ ಮೂರು ತಿಂಗಳ ಕಾಲ ಮಾಸಿಕ ‘ಮನ್‌ ಕೀ ಬಾತ್‌’ ರೆಡಿಯೊ ಕಾರ್ಯಕ್ರಮದ ಪ್ರಸಾರ ಇರುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.

ಕಾರ್ಯಕ್ರಮದ 110ನೇ ಸಂಚಿಕೆಯಲ್ಲಿ ಮಾತನಾಡಿದ್ದ ಅವರು, ಚುನಾವಣಾ ನೀತಿ ಸಂಹಿತೆಯು ಮಾರ್ಚ್‌ನಲ್ಲಿ ಜಾರಿಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.

‘ಮನ್‌ ಕೀ ಬಾತ್‌’ 110 ಸಂಚಿಕೆಗಳಲ್ಲೂ ದೊಡ್ಡ ಯಶಸ್ಸು ಕಂಡಿದೆ. ಪ್ರಸಾರವನ್ನು ದೇಶದ ಸಾಮೂಹಿಕ ಶಕ್ತಿ ಮತ್ತು ಸಾಧನೆಗೆ ಸಮರ್ಪಿಸಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಇದು ಜನರಿಂದ, ಜನರಿಗಾಗಿ ಮಾಡುತ್ತಿರುವ ಜನರ ಕಾರ್ಯಕ್ರಮವಾಗಿದೆ’ ಎಂದು ಮೋದಿ ಹೇಳಿದ್ದಾರೆ.

ನಾವು ಮುಂದಿನ ಬಾರಿ ಭೇಟಿಯಾದಾಗ, ಅದು ‘ಮನ್‌ ಕೀ ಬಾತ್‌’ನ 111ನೇ ಸಂಚಿಕೆಯಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ 2019ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT