ವಯನಾಡ್‌ನಲ್ಲಿ ಭೀಕರ ಭೂಕುಸಿತ ಸಂಭವಿಸಿದ ಕಾರಣಕ್ಕೆ ಯಾವುದೇ ಓಣಂ ಅಧಿಕೃತ ಆಚರಣೆ ಇರುವುದಿಲ್ಲ ಎಂದು ರಾಜ್ಯ ಸರ್ಕಾರ ಈಗಾಗಲೇ ಘೋಷಣೆ ಮಾಡಿತ್ತು. ಶನಿವಾರ ತಮ್ಮ ಓಣಂ ಸಂದೇಶ ನೀಡಿದ್ದ ಕೇರಳ ಮುಖ್ಯಮಂತ್ರಿ, ‘ರಾಜ್ಯ ಸರ್ಕಾರ ಈಗ ಮನೆಗಳ ಪುನರ್‌ನಿರ್ಮಾಣ ಮಾಡುವ, ಜನಜೀವನವನ್ನು ಸಹಜ ಸ್ಥಿತಿಗೆ ತರುವ ಪ್ರಮುಖ ಕಾರ್ಯದಲ್ಲಿ ನಿರತವಾಗಿದೆ. ಆ ಮೂಲಕ ಭೂಕುಸಿತದ ಪ್ರದೇಶಗಳನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಕ್ರಿಯಾಶೀಲವಾಗಿಸುವ ಕೆಲಸದಲ್ಲಿದೆ. ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಜನರು ಕೊಡುಗೆ ನೀಡುವ ಮೂಲಕ ಭೂಕುಸಿದ ಪ್ರದೇಶಗಳ ಪುನರ್‌ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಬೇಕು’ ಎಂದು ಮನವಿ ಮಾಡಿದ್ದಾರೆ.