ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ– ಕಿಸಾನ್‌ ಅಡಿ ಆರ್ಥಿಕ ನೆರವು ಹೆಚ್ಚಳ ಇಲ್ಲ: ಕೇಂದ್ರ ಕೃಷಿ ಸಚಿವ

Published 5 ಡಿಸೆಂಬರ್ 2023, 16:42 IST
Last Updated 5 ಡಿಸೆಂಬರ್ 2023, 16:42 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ ನಿಧಿ (ಪಿಎಂ– ಕಿಸಾನ್‌) ಅಡಿ ರೈತರಿಗೆ ನೀಡುವ ವಾರ್ಷಿಕ ನೆರವನ್ನು ಹೆಚ್ಚಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರು ಲೋಕಸಭೆಗೆ ಮಂಗಳವಾರ ತಿಳಿಸಿದರು.

ಈ ಯೋಜನೆ ಅಡಿ ಸದ್ಯ ₹ 6,000ವನ್ನು ರೈತರಿಗೆ ಮೂರು ಕಂತುಗಳಲ್ಲಿ ನೀಡಲಾಗುತ್ತಿದೆ.

ಈ ವರೆಗೆ ಕೇಂದ್ರವು ₹ 2.81 ಲಕ್ಷ ಕೋಟಿಯನ್ನು 11 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ 15 ಕಂತುಗಳಲ್ಲಿ ನೀಡಿದೆ ಎಂದು ತೋಮರ್‌ ತಿಳಿಸಿದರು. 

ಕೃಷಿ ವಲಯದ ಸುಧಾರಣೆಗೆ ಸಂಬಂಧಿಸಿ ಸ್ವಾಮಿನಾಥನ್‌ ಆಯೋಗದ ನೀಡಿದ್ದ ವರದಿ ಅನುಷ್ಠಾನದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಸೇರಿ ಹಲವು ವಿಷಯಗಳ ಕುರಿತು ಪರಿಶೀಲನೆ ನಡೆಸಲು ಸರ್ಕಾರವು ಸಮಿತಿ ರಚಿಸಿದೆ. ಸಮಿತಿಯು ವರದಿಯನ್ನು ಇನ್ನಷ್ಟೇ ನೀಡಬೇಕಿದೆ ಎಂದರು.

ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ಪ್ರಶೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ತೋಮರ್‌, ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ಕೃಷಿ ವಿಜ್ಞಾನಿ ಎಂ.ಎಸ್‌. ಸ್ವಾಮಿನಾಥನ್‌ ಅವರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿಯು 2017ರಲ್ಲಿ ವರದಿ ನೀಡಿತು. ಆಗ ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರವಿತ್ತು ಎಂದರು.

ಯುಪಿಎ ಸರ್ಕಾರ 2014ರ ವರೆಗೆ ಮಾತ್ರವಿತ್ತು. ಆಗ ವರದಿ ಬಂದಿರಲಿಲ್ಲ ಎಂದು ಚೌಧರಿ ಪ್ರತಿಕ್ರಿಯಿಸಿದರು.

ಸ್ವಾಮಿನಾಥನ್‌ ಸಮಿತಿಯು 201 ಶಿಫಾರಸುಗಳನ್ನು ನೀಡಿದೆ. ಅವುಗಳಲ್ಲಿ 100 ಶಿಫಾರಸುಗಳ ಮೇಲೆ ಎನ್‌ಡಿಎ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತೋಮರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT