ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ | ಸಚಿವರಿಗೆ, ನೌಕರರಿಗೆ ವಿದ್ಯುತ್‌ ಸಬ್ಸಿಡಿ ಇಲ್ಲ: CM ಹಿಮಂತ ಬಿಸ್ವ

ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿಕೆ
Published 11 ಫೆಬ್ರುವರಿ 2024, 12:26 IST
Last Updated 11 ಫೆಬ್ರುವರಿ 2024, 12:26 IST
ಅಕ್ಷರ ಗಾತ್ರ

ಗುವಾಹಟಿ : ‘ಅಸ್ಸಾಂನ ಸಚಿವರು, ಅಧಿಕಾರಿಗಳು ಅಥವಾ ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ವಿದ್ಯುತ್‌ ಸೌಲಭ್ಯ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಭಾನುವಾರ ಹೇಳಿದ್ದಾರೆ.

ಸಚಿವರ ನಿವಾಸಗಳು ಸೇರಿದಂತೆ ಸರ್ಕಾರಿ ನಿವಾಸಗಳಲ್ಲಿ ತಕ್ಷಣದಿಂದಲೇ ಪ್ರಿಪೇಯ್ಡ್‌ ಮೀಟರ್ ಅಳವಡಿಸುವಂತೆ ಇಂಧನ ಇಲಾಖೆಗೆ ಸೂಚಿಸಿರುವ ಅವರು, ‘ಸಚಿವರು, ಅಧಿಕಾರಿಗಳು, ಸರ್ಕಾರಿ ನೌಕರರಿಗೆ ಸಬ್ಸಿಡಿ ದರದ ವಿದ್ಯುತ್ ಬಳಸಲು ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.

‘ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಂಬಳದಲ್ಲಿ ಸ್ವಲ್ಪ ಮೊತ್ತವನ್ನು ಮಾಸಿಕ ವಿದ್ಯುತ್ ಬಿಲ್‌ಗೆ ಕಡಿತಗೊಳಿಸುವಂತೆ ಈಚೆಗೆ ನಡೆದ ಸಂವಾದದಲ್ಲಿ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಶರ್ಮ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT