ಮುಂಬೈ: ಸುದೀರ್ಘ ಅವಧಿಯ ತಡೆರಹಿತ ಹಾಡುಗಾರಿಕೆ ಮೂಲಕ ‘ಕರೋಕೆ ಸಂಗೀತ ಮ್ಯಾರಥಾನ್’ನಲ್ಲಿ ಭಾರತ ಹೊಸ ದಾಖಲೆ ಬರೆದಿದ್ದು, ಚೀನಾವನ್ನು ಹಿಂದಿಕ್ಕಿದೆ.

ಚೀನಾದ 792 ಗಂಟೆ 2 ನಿಮಿಷದದಾಖಲೆಯನ್ನುವಿರಾಗ್ ಮಧುಮಾಲಿನಿ ಮತ್ತು ಅವರ ತಂಡ ಬುಧವಾರ ಮುಧ್ಯಾಹ್ನ ಸರಿಗಟ್ಟಿತು. ಮುದ್ರಿತ ವಾದ್ಯಸಂಗೀತದ ಜತೆ ಹಾಡುವ ಕರೋಕೆ ಸಂಗೀತ ಮ್ಯಾರಥಾನ್ ಭಾನುವಾರದವರೆಗೆ ಮುಂದುವರಿಯಲಿದ್ದು, 1000 ಗಂಟೆಗಳ ಮೈಲುಗಲ್ಲು ನಿರ್ಮಿಸಲು ತಂಡ ಸಜ್ಜಾಗಿದೆ.

ನವಿ ಮುಂಬೈನ ಲಿಟ್ಲ್ ವರ್ಲ್ಡ್ ಮಾಲ್ನಲ್ಲಿ ನವೆಂಬರ್ 15ರಿಂದ ಈ ಕಾರ್ಯಕ್ರಮ ನಡೆಯುತ್ತಿದೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಿಬ್ಬಂದಿಯ ಸಮ್ಮುಖದಲ್ಲಿ ಡಿಸೆಂಬರ್ 22ರಂದು ಫೈನಲ್ ನಡೆಯಲಿದೆ. ಆ ಮೂಲಕ ಭಾರತ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಯಾಗಲಿದೆ.

‘ಬೇಟಿ ಬಚಾವೊ ಬೇಟಿ ಪಡಾವೊ’, ‘ಜಾಗತಿಕ ಹವಾಮಾನ ತಡೆ’, ‘ನೀರು ಉಳಿಸಿ, ಮರಗಳನ್ನು ರಕ್ಷಿಸಿ’, ‘ಅಂಗಾಗ ದಾನ ಮಾಡಿ’ ಎಂಬ ಸಾಮಾಜಿಕ ಕಳಕಳಿಯ ಉದ್ದೇಶವನ್ನು ಪ್ರಚುರಪಡಿಸುವುದು ಈ ಮ್ಯಾರಥಾನ್ನ ಉದ್ದೇಶ.

800 ಸಂಗೀತಗಾರರು

ದೆಹಲಿ, ಕೇರಳ, ಚೆನ್ನೈ, ಆಂಧ್ರಪ್ರದೇಶ, ಒಡಿಶಾ, ರಾಜಸ್ಥಾನ ಸೇರಿದಂತೆ ವಿವಿಧ ಭಾಗಗಳ 800ಕ್ಕೂ ಹೆಚ್ಚು ಗಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈವರೆಗೆ 9 ಸಾವಿರ ಗೀತೆಗಳನ್ನು ಹಾಡಿದ್ದಾರೆ. ಸಂಗೀತಾಸಕ್ತರಿಗೆ ಇದೊಂದು ಹಬ್ಬವಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರತಿ ಕ್ಷಣವನ್ನೂ ಸೆರೆಹಿಡಿಯಲು ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಬಾಲಿವುಡ್ನ ಸಂಗೀತಗಾರರು, ಕಲಾವಿದರು, ರಾಜಕಾರಣಿಗಳು ಹಾಗೂ ಗಣ್ಯರು ಭೇಟಿ ನೀಡಿ ಕರೋಕೆ ಮ್ಯಾರಥಾನ್ಗೆ ಸಾಕ್ಷಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.