ಮುಂಬೈ: ‘ಉಪ ಮುಖ್ಯಮಂತ್ರಿಗಳಾಗಿರುವ ಶಿವಸೇನೆಯ ಏಕನಾಥ ಶಿಂದೆ ಮತ್ತು ಎನ್ಸಿಪಿಯ ಅಜಿತ್ ಪವಾರ್ ಇಬ್ಬರೂ ಉತ್ತಮ ಸಂವಹನಕಾರರಲ್ಲ’ ಎಂದು ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.

ಸುದ್ದಿಗಾರರ ಜೊತೆಗೆ ಮಾತನಾಡುತ್ತಿದ್ದ ಫಡಣವೀಸ್, ‘ಡಿಸಿಎಂಗಳ ಪೈಕಿ ಉತ್ತಮ ಸಂವಹನಕಾರರು ಯಾರು’ ಎಂಬ ಪ್ರಶ್ನೆಗೆ ಲಘು ಧಾಟಿಯಲ್ಲಿ ಹೀಗೆ ಪ್ರತಿಕ್ರಿಯಿಸಿದರು.

‘ನಿಮ್ಮೊಂದಿಗೆ ಮುಕ್ತವಾಗಿ ಚರ್ಚಿಸುವುದಾದರೆ ಇಬ್ಬರಿಗೂ ಉತ್ತಮ ಸಂವಹನ ಕಲೆ ಇಲ್ಲ. ಈ ಮಾತಿಗಾಗಿ ಅವರು ನನಗೆ ಕ್ಷಮಿಸಬೇಕು’ ಎಂದು ಫಡಣವೀಸ್ ಹೇಳಿದರು.

ಇದಕ್ಕೆ ಉಭಯ ಮುಖಂಡರೂ ಪ್ರತಿಕ್ರಿಯಿಸಿಲ್ಲ. ಆದರೆ, ಪ್ರತಿಪಕ್ಷಗಳ ಮೈತ್ರಿಕೂಟ ಮಹಾವಿಕಾಸ ಆಘಾಡಿ, ‘ಸರ್ಕಾರದಲ್ಲೇ ಪರಸ್ಪರ ಸಂವಹನ ಇಲ್ಲ. ಚರ್ಚೆಯೇ ಇಲ್ಲದೇ ಸರ್ಕಾರ ನಡೆಯುತ್ತಿದೆ’ ಎಂದು ಟೀಕಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.