ಭುವನೇಶ್ವರ: ಒಡಿಶಾದ ರೂರ್ಕೆಲಾದಲ್ಲಿರುವ ಉಕ್ಕು ಕಾರ್ಖಾನೆ ರೂರ್ಕೆಲಾ ಸ್ಟೀಲ್ ಪ್ಲ್ಯಾಂಟ್‌ನಲ್ಲಿ (ಆರ್‌ಎಸ್‌ಪಿ) ಬುಧವಾರ ವಿಷಾನಿಲ ಸೋರಿಕೆಯಾಗಿ ನಾಲ್ವರು ಕಾರ್ಮಿಕರು ಮೃತಪಟ್ಟು, ಕೆಲವರು ಅಸ್ವಸ್ಥರಾಗಿದ್ದಾರೆ.

ಗಣೇಶಚಂದ್ರ ಪೈಲಾ (55), ರವೀಂದ್ರ ಸಾಹು (59), ಅಭಿಮನ್ಯು ಶಾ (33) ಹಾಗೂ ಬ್ರಹ್ಮಾನಂದ ಪಾಂಡಾ (51) ಮೃತ ಕಾರ್ಮಿಕರು.

ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ (ಸೇಲ್) ಒಡೆತನದ ಕಾರ್ಖಾನೆ ಇದಾಗಿದೆ.

ಕಾರ್ಖಾನೆಯ ಕಲ್ಲಿದ್ದಲು ವಿಭಾಗದಲ್ಲಿ ಬೆಳಗಿನ ಪಾಳಿಯಲ್ಲಿ 10 ಜನ ಕಾರ್ಮಿಕರು ಕರ್ತವ್ಯದಲ್ಲಿದ್ದರು. ಈ ಪೈಕಿ ಹೊರಗುತ್ತಿಗೆ ಆಧಾರದ ನಾಲ್ವರು ಕಾರ್ಮಿಕರು 9 ಗಂಟೆ ವೇಳೆ ಅಸ್ವಸ್ಥರಾದರು. ಕೂಡಲೇ ಅವರನ್ನು ಕಾರ್ಖಾನೆಗೆ ಹೊಂದಿಕೊಂಡಿರುವ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಇಸ್ಪಾಟ್ ಜನರಲ್ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದರು’ ಎಂದು ಕಾರ್ಖಾನೆ ಅಧಿಕಾರಿಗಳು ಹೇಳಿದರು.

‘ವಿಷಾನಿಲ ಸೋರಿಕೆ ಹೇಗಾಯಿತು ಎಂಬುದರ ಕುರಿತು ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದೂ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.