ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ದಾಖಲೆಯಿಲ್ಲದ’ ₹ 220 ಕೋಟಿ ಜಪ್ತಿ

Published 8 ಡಿಸೆಂಬರ್ 2023, 15:53 IST
Last Updated 8 ಡಿಸೆಂಬರ್ 2023, 15:53 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಒಡಿಶಾ ಮೂಲದ ಡಿಸ್ಟಿಲರಿ ಸಮೂಹದ ಕಚೇರಿಯಲ್ಲಿ ಶುಕ್ರವಾರವೂ ತಪಾಸಣೆ ಮುಂದುವರಿಸಿದ ಐ.ಟಿ.ಅಧಿಕಾರಿಗಳು ‘ದಾಖಲೆಯಿಲ್ಲದ’ ₹ 220 ಕೋಟಿ ನಗದು ಪತ್ತೆ ಮಾಡಿದ್ದಾರೆ. ಜಪ್ತಿಯಾದ ಮೊತ್ತ ₹ 250 ಕೋಟಿಗೂ ಹೆಚ್ಚಿರಬಹುದು ಎಂದು ತಿಳಿಸಿದ್ದಾರೆ.

‘ಹಣ ಎಣಿಕೆಗೆ ಮೂರು ಡಜನ್‌ಗೂ ಹೆಚ್ಚು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. ಇವುಗಳ ಎಣಿಕೆ ಮಿತಿ ಸೀಮಿತವಾಗಿದ್ದು, ಇಡೀ ಪ್ರಕ್ರಿಯೆ ವಿಳಂಬವಾಗಬಹುದು. ಅಲ್ಮೆರಾಗಳಲ್ಲಿ ಹಣ ಜೋಡಿಸಿಟ್ಟಿದ್ದು, ಎಣಿಕೆ ನಡೆದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೌದ್‌ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನ ವಿವಿಧ ಕಚೇರಿಗಳ ಮೇಲೆ ಬುಧವಾರ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT