ಭುವನೇಶ್ವರ: ಸ್ನಾನಗೃಹದಲ್ಲಿ ತಮ್ಮೊಂದಿಗೆ ಬಕೆಟ್ ಹಂಚಿಕೊಳ್ಳಲು ನಿರಾಕರಿಸಿದ ಒಂಬತ್ತನೆಯ ತರಗತಿಯ, 14 ವರ್ಷದ ಬುಡಕಟ್ಟು ವಿದ್ಯಾರ್ಥಿಯನ್ನು ಕತ್ತುಬಿಗಿದು ಕೊಲೆ ಮಾಡಿದ ಪ್ರಕರಣದಲ್ಲಿ, ಒಡಿಶಾ ಪೊಲೀಸರು ಭುವನೇಶ್ವರದ ಕಳಿಂಗ ಸಮಾಜ ವಿಜ್ಞಾನ ಸಂಸ್ಥೆಯ (ಕೆಐಎಸ್ಎಸ್) ಎಂಟು ಶಿಕ್ಷಕ ಸಿಬ್ಬಂದಿ ಹಾಗೂ ಕಾನೂನಿನ ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರನ್ನು ವಶಕ್ಕೆ ಪಡೆದಿದ್ದಾರೆ.

ಕಾನೂನಿನ ಸಂಘರ್ಷಕ್ಕೆ ಒಳಗಾದ ಬಾಲಕರ ವಿರುದ್ಧ ಬಿಎನ್ಎಸ್ ಸೆಕ್ಸನ್ 106 (1), ಬಾಲ ನ್ಯಾಯ ಕಾಯ್ದೆ –2015ರ ಸೆಕ್ಸನ್ 75ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ದೇವದತ್ತ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಬಾಲಕನ ಹತ್ಯೆ ವಿಷಯವನ್ನು ಬಹಿರಂಗಪಡಿಸದಂತೆ ಸಾಕ್ಷಿಗಳನ್ನು ಬೆದರಿಸಿದ, ಸಾಕ್ಷ್ಯ ನಾಶಪಡಿಸಿದ ಮತ್ತು ಅಪರಾಧಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಕೆಐಎಸ್ಎಸ್ನ ಹೆಚ್ಚುವರಿ ಸಿಇಒ ಮತ್ತು ಇಬ್ಬರು ಶಿಕ್ಷಕರನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ಬಾಲಕನ ಸಾವು ಆಕಸ್ಮಿಕವಾಗಿ ಸಂಭವಿಸಿದ್ದಲ್ಲ, ಕೊಲೆ ಎನ್ನುವುದು ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕನ ಕುತ್ತಿಗೆ ಬಳಿ ಹಗ್ಗ, ಬಟ್ಟೆ ಅಥವಾ ಇತರೆ ಒರಟಾದ ವಸ್ತುವಿನಿಂದ ಗಾಯವಾಗಿರುವುದು ಮತ್ತು ಇದರಿಂದಲೇ ಸಾವು ಸಂಭವಿಸಿರುವುದು ದೃಢಪಟ್ಟಿತ್ತು. ಕೃತ್ಯದಲ್ಲಿ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮೂವರು ಬಾಲಕರ ಪಾತ್ರ ಇರುವುದನ್ನು ಮೃತ ವಿದ್ಯಾರ್ಥಿಯ ಸಹಪಾಠಿಗಳು ಮತ್ತು ಆತನೊಂದಿಗೆ ವಸತಿ ನಿಲಯದಲ್ಲಿ ಇದ್ದ ಇತರೆ ವಿದ್ಯಾರ್ಥಿಗಳು ಖಚಿತಪಡಿಸಿದ್ದರು’ ಎಂದು ತಿಳಿಸಿದ್ದಾರೆ.

ಕಾಲುಜಾರಿ ಬಿದ್ದಿದ್ದಾಗಿ ಹೇಳಿದ್ದರು

ಡಿ.11ರ ರಾತ್ರಿ ಬಾಲಕನ ಹತ್ಯೆ ನಡೆದಿತ್ತು. ಡಿ.12ರಂದು ಬಾಲಕನ ಮೃತದೇಹವನ್ನು ಆತನ ತಂದೆಗೆ ಹಸ್ತಾಂತರಿಸಿದ್ದ ಕೆಐಎಸ್ಎಸ್ ಸಿಬ್ಬಂದಿ, ‘ಆತ ಸ್ನಾನಗೃಹದಲ್ಲಿ ಜಾರಿಬಿದ್ದು, ಗಾಯಗೊಂಡು ಮೃತಪಟ್ಟಿದ್ದಾನೆ’ ಎಂದು ಹೇಳಿದ್ದರು. ಬಾಲಕನ ಸಾವಿನ ಬಗ್ಗೆ ಪೊಲೀಸರಿಗೆ ಸಂಸ್ಥೆ ಮಾಹಿತಿ ನೀಡಿರಲಿಲ್ಲ.

‘ಸ್ನಾನಗೃಹದಲ್ಲಿ ಕಾಲು ಜಾರಿ ಬಿದ್ದು, ಗಾಯಗೊಂಡಿರುವ ಪುತ್ರನಿಗೆ, ಕಳಿಂಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕೆಐಎಂಎಸ್) ಚಿಕಿತ್ಸೆ ನೀಡಲಾಗುತ್ತಿದೆ. ಬನ್ನಿ’ ಎಂದು ಎಂದು ಸಂಸ್ಥೆಯ ಸಿಬ್ಬಂದಿ ಕರೆ ಮಾಡಿ ತಿಳಿಸಿದ್ದರು. ಅಲ್ಲಿಗೆ ಹೋದಾಗ, ಪುತ್ರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಆದರೆ, ‘ನನ್ನ ಮಗನ ಸಾವು ಆಕಸ್ಮಿಕವಲ್ಲ, ಕೊಲೆ’ ಎಂದು ಮೃತ ಬಾಲಕನ ತಂದೆ, ಕಿಯೊಂಜರ್ ಠಾಣೆಗೆ ಡಿ.13ರಂದು ದೂರು ನೀಡಿದ್ದರು.

8 ಮಂದಿ ವಿರುದ್ಧ ಕೊಲೆ ಪ್ರಕರಣ

ಬಾಲಕನ ಹತ್ಯೆ ಪ್ರಕರಣದಲ್ಲಿ, ಕೆಐಎಸ್ಎಸ್ನ ಎಂಟು ಮಂದಿ ಸಿಬ್ಬಂದಿ ವಿರುದ್ಧ ಬಿಎನ್ಎಸ್ ಸೆಕ್ಸನ್ 103 (1) (ಕೊಲೆ), 238 ( ಸಾಕ್ಷ್ಯ ನಾಶಪಡಿಸುವಿಕೆ) 296 (ಅಸಭ್ಯ ಕೃತ್ಯ), 232 (ಬೆದರಿಕೆ, ಸುಳ್ಳು ಸಾಕ್ಷ್ಯ), 249 ಎ (ಅಪರಾಧಿಗೆ ರಕ್ಷಣೆ) ಮತ್ತು ಬಾಲ ನ್ಯಾಯ ಕಾಯ್ದೆಯ ಸೆಕ್ಸನ್ 351 (3) (ಕ್ರಿಮಿನಲ್ ಬೆದರಿಕೆ) ಆರೋಪಗಳಡಿ ಪ್ರಕರಣದ ದಾಖಲಿಸಲಾಗಿದೆ.

ಕಾನೂನು ಸಂಘರ್ಷಕ್ಕೆ ಒಳಗಾದವರನ್ನು ಬಾಲ ನ್ಯಾಯ ಮಂಡಳಿ ಮತ್ತು ಇತರೆ ಎಂಟು ಮಂದಿ ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಜನಾಕ್ರೋಶ, ಪ್ರತಿಭಟನೆ

ಬುಡಕಟ್ಟು ಬಾಲಕನ ಹತ್ಯೆಯು ಕಿಯೊಂಜರ್ ಜಿಲ್ಲೆಯಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಡಿ. 13ರಂದು ಸ್ಥಳೀಯರು ಬಾಲಕನ ಮೃತದೇಹದೊಂದಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು.

ಕಿಯೊಂಜರ್ ನಗರ ಠಾಣೆಯಲ್ಲಿ ದಾಖಲಾದ ಝೀರೊ ಎಫ್ಐಆರ್ (ಬೇರೊಂದು ಠಾಣೆಯ ವ್ಯಾಪ್ತಿಯಲ್ಲಿ ನಡೆದ ಅಪರಾಧದ ದೂರು) ಆಧರಿಸಿ, ಇನ್ಫೊಸಿಟಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.