ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓಮೈಕ್ರಾನ್‌ ಕೇಂದ್ರಿತ ಬೂಸ್ಟರ್‌ ಲಸಿಕೆ ಬಿಡುಗಡೆ

Published 24 ಜೂನ್ 2023, 23:30 IST
Last Updated 24 ಜೂನ್ 2023, 23:30 IST
ಅಕ್ಷರ ಗಾತ್ರ

ನವದೆಹಲಿ: ಕೊರೊನ ವೈರಸ್‌ ಉಪತಳಿ ಓಮೈಕ್ರಾನ್‌ ಕೇಂದ್ರಿತವಾಗಿ ಅಭಿವೃದ್ಧಿಪಡಿಸಲಾಗಿರುವ ಎಂಆರ್‌ಎನ್‌ಎ ಆಧರಿತ ಕೋವಿಡ್‌ ಬೂಸ್ಟರ್‌ ಲಸಿಕೆ ‘ಜೆಮ್‌ಕೋವ್ಯಾಕ್‌–ಒಎಂ’ ಅನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಶನಿವಾರ ಬಿಡುಗಡೆ ಮಾಡಿದರು.

ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ), ಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ಸಹಕಾರ ಮಂಡಳಿ (ಬಿಐಆರ್‌ಎಸಿ) ಸಹಕಾರದೊಂದಿದೆ ಜೆನ್ನೊವಾ ಸಂಸ್ಥೆಯು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ದೇಶೀಯ ತಂತ್ರಜ್ಞಾನ ಬಳಿಸಿ ಅಭಿವೃದ್ಧಿಪಡಿಸಲಾಗಿರುವ ಮೊದಲ ಭಾರತೀಯ ಎಂಆರ್‌ಎನ್‌ಎ ಆಧರಿತ ಲಸಿಕೆ ಇದಾಗಿದೆ. 

ತುರ್ತು ಸಂದರ್ಭಗಳಲ್ಲಿ ಬಳಸಲು ಈ ಲಸಿಕೆಗೆ ಭಾರತೀಯ ಔಷದ ನಿಯಂತ್ರಣ ಮಹಾ ನಿರ್ದೇಶಕರ (ಡಿಸಿಜಿಐ) ಕಚೇರಿಯು ಕೆಲ ದಿನಗಳ ಹಿಂದಯಷ್ಟೇ ಅನುಮತಿ ನೀಡಿತ್ತು. 

ಕೋವಿಡ್‌– 19 ಲಸಿಕೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿದ್ದ ಆತ್ಮನಿರ್ಭರ ಭಾರತ 3.0 ಪ್ಯಾಕೇಜ್ ಅಡಿ ಕೋವಿಡ್‌ ಸುರಕ್ಷಾ ಯೋಜನೆಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾದ ಐದನೇ ಲಸಿಕೆ ‘ಜೆಮ್‌ಕೋವ್ಯಾಕ್‌–ಒಎಂ’ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT