ನವದೆಹಲಿ: ವಿರೋಧ ಪಕ್ಷಗಳಿಂದ ಎದುರಾಗುವ ಕಠಿಣ ಪ್ರಶ್ನೆಗಳಿಂದ ಪಾರಾಗಲು ಹಾಗೂ ಗಮನವನ್ನು ಬೇರೆಡೆಗೆ ಸೆಳೆಯುವ ನಿಟ್ಟಿನಲ್ಲಿ 'ಆಪರೇಷನ್ ಸಿಂಧೂರ'ದ ಬಳಿಕ ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿಕೊಡಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, 'ಜಾಗತಿಕವಾಗಿ ಭಾರತಕ್ಕೆ ಧಕ್ಕೆಯಾಗಿದೆ' ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ ವಿರುದ್ಧದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಬೆನ್ನಲ್ಲೇ ಉಗ್ರವಾದ ಕುರಿತು ವಿಶ್ವ ಸಮುದಾಯಕ್ಕೆ ವಿವರಿಸುವ ಉದ್ದೇಶದಿಂದ ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು.

ಮಾಜಿ ಪ್ರಧಾನಿ ರಾಜೀವ್ ಗಾಂಧಿ 34ನೇ ಪುಣ್ಯತಿಥಿ ಅಂಗವಾಗಿ ಮಾತನಾಡಿದ ಜೈರಾಮ್, '1950ರ ದಶಕದಿಂದಲೂ ಸರ್ವಪಕ್ಷಗಳ ನಿಯೋಗವನ್ನು ವರ್ಷಂಪ್ರತಿ ಅಕ್ಟೋಬರ್-ನವೆಂಬರ್ನಲ್ಲಿ ವಿಶ್ವಸಂಸ್ಥೆಗೆ ಕಳುಹಿಸಲಾಗುತ್ತಿತ್ತು. ಆದರೆ 2014ರಲ್ಲಿ ಈ ಸಂಪ್ರದಾಯವನ್ನು ಪ್ರಧಾನಿ ಮೋದಿ ನಿಲ್ಲಿಸಿದ್ದರು' ಎಂದು ಹೇಳಿದ್ದಾರೆ.

'ಆದರೆ ಈಗ ಜಾಗತಿಕವಾಗಿ ಭಾರತಕ್ಕೆ ಧಕ್ಕೆಯಾಗಿದೆ. ಇದರಿಂದ ವಿಪಕ್ಷಗಳಿಂದ ಎದುರಾಗುವ ಕಠಿಣ ಸವಾಲುಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಇದ್ದಕ್ಕಿದ್ದಂತೆ ವಿದೇಶಗಳಿಗೆ ಸಂಸದರು ಇರುವ ಸರ್ವಪಕ್ಷಗಳ ನಿಯೋಗದ ಕುರಿತು ಪ್ರಧಾನಿ ಯೋಚಿಸಿದ್ದಾರೆ' ಎಂದು ಜೈರಾಮ್ ಆರೋಪಿಸಿದ್ದಾರೆ.
.ಸರ್ವಪಕ್ಷಗಳ ನಿಯೋಗ | ತರೂರ್ಗೆ ನೇತೃತ್ವ: ಕಾಂಗ್ರೆಸ್ ಕಿಡಿ.Operation Sindoor: ಮಿತ್ರ ರಾಷ್ಟ್ರಗಳಿಗೆ ಮಾಹಿತಿ ನೀಡಲು ಸರ್ವಪಕ್ಷಗಳ 7 ನಿಯೋಗ.
ಪಹಲ್ಗಾಮ್: ದಾಳಿಕೋರರ ಬಂಧನಕ್ಕೆ ಮೊದಲೇ ವಿದೇಶಗಳಿಗೆ ನಿಯೋಗ–ಟೀಕೆ

ನವದೆಹಲಿ: ‘ಪಹಲ್ಗಾಮ್ ದಾಳಿ ಕೃತ್ಯದ ಉಗ್ರರು ಇನ್ನು ತಲೆಮರೆಸಿಕೊಂಡಿದ್ದಾರೆ. ಆದರೆ, ಸರ್ಕಾರ ವಿದೇಶಗಳಿಗೆ ರಾಜತಾಂತ್ರಿಕ ನಿಯೋಗಗಳನ್ನು ಕಳುಹಿಸುತ್ತಿದೆ‘ ಎಂದು ಕಾಂಗ್ರೆಸ್ ಟೀಕಿಸಿದೆ.

26/11ರ ಉಗ್ರರ ದಾಳಿ ಕೃತ್ಯದ ಬಳಿಕ ಸಂಚುಕೋರರು, ಉಗ್ರರನ್ನು ಹತ್ಯೆ ಮಾಡಿದ್ದು ಒಬ್ಬ ಉಗ್ರನನ್ನು ಬಂಧಿಸಲಾಗಿತ್ತು. ಹೀಗಾಗಿ, ಭಾರತಕ್ಕೆ ವಿವಿಧ ರಾಷ್ಟ್ರಗಳ ಬೆಂಬಲ ವ್ಯಕ್ತವಾಗಿತ್ತು ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಬುಧವಾರ ಮೆಲುಕು ಹಾಕಿದರು.

ಪಿಟಿಐ ಜೊತೆಗೆ ಮಾತನಾಡಿದ ಅವರು, ‘ಬಿಜೆಪಿಯು ರಾಹುಲ್ ಗಾಂಧಿ ಅವರನ್ನು ಟೀಕಿಸುವ ಬದಲಿಗೆ ತನ್ನ ಶಕ್ತಿ, ಸಾಮರ್ಥ್ಯವನ್ನು ಚೀನಾ ಮತ್ತು ಪಾಕಿಸ್ತಾನ ಗುರಿಯಾಗಿಸಿ ಬಳಸಲಿ’ ಎಂದು ಸಲಹೆ ನೀಡಿದರು.

‘ಮೊಹಮ್ಮದ್ ಅಲಿ ಜಿನ್ನಾ ಅವರಿಗೆ ಕ್ಲೀನ್ ಚಿಟ್ ನೀಡಿದ್ದು ಯಾರು? ಜಸ್ವಂತ್ ಸಿನ್ಹಾ ಮತ್ತು ಎಲ್.ಕೆ.ಅಡ್ವಾಣಿ ಇಬ್ಬರೂ ಜಿನ್ನಾ ಅವರನ್ನು ಮಹಾನ್ ನಾಯಕ ಎಂದು ಹೊಗಳಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು ಲಾಹೋರ್ಗೆ ಬಸ್ ಯಾತ್ರೆ ಒಯ್ದಿದ್ದರು. ನರೇಂದ್ರ ಮೋದಿ ಅವರು ನವಾಜ್ ಷರೀಫ್ ಅವರೊಂದಿಗೆ ತಿಂಡಿ ತಿನ್ನಲು ಲಾಹೋರ್ಗೆ ಹೋಗಿದ್ದರು’ ಎಂದೂ ಟೀಕಿಸಿದರು.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ನಿಶಾನ್ ಇ ಪಾಕಿಸ್ತಾನ್’ ಗೌರವ ಸಂದಿತ್ತು. ಅವರ ಸಂಪುಟದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರೂ ವಿದೇಶಾಂಗ ಸಚಿವರಾಗಿದ್ದರು ಎಂಬುದನ್ನು ಬಿಜೆಪಿ ಸ್ಮರಿಸಬೇಕು ಎಂದರು.

ಪಹಲ್ಗಾಮ್ ದಾಳಿ ಕೃತ್ಯ ನಡೆದ ತಿಂಗಳ ನಂತರವೂ ಏಕೆ ಉಗ್ರರ ಬಂಧನವಾಗಿಲ್ಲ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.