ಇಂತಹ ಮಹತ್ವದ ಸಂದರ್ಭದಲ್ಲಿ ಭಾರತ ಒಟ್ಟಾಗಿ ನಿಲ್ಲಲಿದೆ. ಸರ್ವಪಕ್ಷಗಳ ಏಳು ನಿಯೋಗಗಳು ನಮ್ಮ ಪಾಲುದಾರ ರಾಷ್ಟ್ರಗಳಿಗೆ ಶೀಘ್ರವೇ ತೆರಳಲಿವೆ. ಉಗ್ರವಾದ ಕುರಿತು ಭಾರತ ತಳೆದಿರುವ ಶೂನ್ಯ ಸಹಿಷ್ಣುತೆಯ ಸಂದೇಶವನ್ನು ಈ ನಿಯೋಗಗಳು ಹೊತ್ತೊಯ್ಯಲಿವೆ. ರಾಜಕೀಯ ಹಾಗೂ ಭಿನ್ನಾಭಿಪ್ರಾಯಗಳಿಗೂ ಮೀರಿದ ರಾಷ್ಟ್ರೀಯ ಏಕತೆಯ ಪ್ರತಿಬಿಂಬವಾಗಿ ಈ ನಿಯೋಗಗಳು ನಿಲ್ಲಲಿವೆ
ಕಿರಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ
ಸರ್ವಪಕ್ಷಗಳ ನಿಯೋಗವೊಂದರ ನೇತೃತ್ವ ವಹಿಸುವಂತೆ ಕೇಂದ್ರ ಸರ್ಕಾರ ಆಹ್ವಾನ ನೀಡಿರುವುದು ನನಗೆ ಗೌರವದ ವಿಚಾರ. ಐದು ದೇಶಗಳಿಗೆ ತೆರಳುವ ನಿಯೋಗವು, ಇತ್ತೀಚಿನ ವಿದ್ಯಮಾನಗಳ ಕುರಿತು ಭಾರತದ ನಿಲುವನ್ನು ವಿವರಿಸಲಿದೆ. ರಾಷ್ಟ್ರೀಯ ಹಿತಾಸಕ್ತಿ ಹಾಗೂ ನನ್ನ ಸೇವೆಯ ಅಗತ್ಯವಿದೆ ಎಂಬ ವಿಚಾರ ಬಂದಾಗ ನಾನು ಹಿಂದಡಿ ಇಡುವುದಿಲ್ಲ. ಜೈ ಹಿಂದ್
ಶಶಿ ತರೂರ್, ಕಾಂಗ್ರೆಸ್ ಸಂಸದ
ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವು ತಿಳಿಸಲಿರುವ ಸರ್ವಪಕ್ಷಗಳ ನಿಯೋಗದ ಭಾಗವಾಗಲು ಅವಕಾಶ ಸಿಕ್ಕಿದ್ದು ಗೌರವದ ವಿಷಯ. ಈ ಜವಾಬ್ದಾರಿಯನ್ನು ವಿನಮ್ರತೆಯಿಂದ ಸ್ವೀಕರಿಸುವೆ. ಪ್ರಧಾನಿ ಮೋದಿ, ಸಚಿವ ರಿಜಿಜು ಹಾಗೂ ವಿದೇಶಾಂಗ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸುವೆ. ಒಂದು ರಾಷ್ಟ್ರವಾಗಿ ನಾವು ಘನತೆಯಿಂದ, ಬಲಿಷ್ಠ ಹಾಗೂ ಅಚಲವಾಗಿ ನಿಲ್ಲುತ್ತೇವೆ
ಸುಪ್ರಿಯಾ ಸುಳೆ, ಎನ್‌ಸಿಪಿ–ಎಸ್‌ಪಿ
ಇದು ನನ್ನ ಪಕ್ಷಕ್ಕೆ ಸಂಬಂಧಿಸಿದ ವಿಷಯವಲ್ಲ, ಇದು ಬಹುಮುಖ್ಯವಾದ ಕಾರ್ಯ. ನನಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ