ನವದೆಹಲಿ: ಪಹಲ್ಗಾಮ್ ಭೀಕರ ಹತ್ಯಾಕಾಂಡ ನಡೆದ ಎರಡು ವಾರಗಳಲ್ಲೇ ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬುಧವಾರ ಮುಂಜಾನೆ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಭಯೋತ್ಪಾದಕರ ಒಂಬತ್ತು ನೆಲೆಗಳನ್ನು 25 ನಿಮಿಷಗಳಲ್ಲೇ ನಾಶಪಡಿಸಿವೆ. ಭಾರತೀಯ ನಾರಿಯರ ಸಿಂಧೂರ (ಕುಂಕುಮ) ಅಳಿಸಿದ ಉಗ್ರರ ವಿರುದ್ಧ ಭಾರತ ಕೈಗೊಂಡ ಪ್ರತೀಕಾರ ಇದಾಗಿದೆ.

ಎರಡೂವರೆ ದಶಕಗಳಿಂದ ಭಾರತಕ್ಕೆ ತಲೆನೋವಾಗಿರುವ ಜಾಗತಿಕ ಉಗ್ರ ಮಸೂದ್ ಅಜರ್ನ ಕುಟುಂಬದ 10 ಸದಸ್ಯರು ಹಾಗೂ ನಾಲ್ವರು ಆಪ್ತರನ್ನು ಹತ್ಯೆಗೈಯುವ ಮೂಲಕ ದಾಳಿಯು ಯೋಜಿತ ಫಲಿತಾಂಶವನ್ನು ಪಡೆದಿದೆ. 14 ಮಂದಿ ಸತ್ತಿರುವುದನ್ನು ಮಸೂದ್ ಅಜರ್ ಕೂಡ ಖಚಿತಪಡಿಸಿದ್ದಾಗಿ ವರದಿಯಾಗಿದೆ. ಕ್ಷಿಪ್ರ ದಾಳಿಯಲ್ಲಿ 70ರಿಂದ 100 ಭಯೋತ್ಪಾದಕರನ್ನು ಕೊಂದು ಹಾಕಲಾಗಿದೆ.

ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದಶಕಗಳಿಂದ ನೆಲೆಯೂರಿ ಭಾರತದಲ್ಲಿ ಹಲವು ದುಷ್ಕೃತ್ಯಗಳನ್ನು ನಡೆಸಿದ್ದ ಜೈಷ್–ಇ–ಮೊಹಮ್ಮದ್, ಲಷ್ಕರ್-ಎ-ತಯಬಾ ಸೇರಿದಂತೆ ಪ್ರಮುಖ ಉಗ್ರರ ತಾಣಗಳ ಮೇಲೆ ಭಾರತೀಯ ಸೇನೆಯು ಭಾರಿ ತಂತ್ರಗಾರಿಕೆಯೊಂದಿಗೆ ನಿಖರ ಪ್ರಹಾರ ನಡೆಸಿದೆ. ಪಾಕಿಸ್ತಾನದ ನಾಲ್ಕು ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಐದು ನೆಲೆಗಳನ್ನು ಗುರಿಯಾಗಿಸಿಕೊಂಡು ಸಶಸ್ತ್ರ ಪಡೆಗಳು ಬೆಳಗಿನ ಜಾವ 1.05ರಿಂದ 1.30ರ ವರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿವೆ.

‘ಈ ದಾಳಿಗಳಲ್ಲಿ ಕನಿಷ್ಠ 26 ಜನರು ಮೃತಪಟ್ಟಿದ್ದಾರೆ ಮತ್ತು 46 ಜನರು ಗಾಯಗೊಂಡಿದ್ದಾರೆ’ ಎಂದು ಪಾಕಿಸ್ತಾನ ಸೇನೆ ಹೇಳಿದೆ. ‘ಯಾವುದೇ ಸೇನಾ ನೆಲೆಯನ್ನು ಗುರಿಯಾಗಿಸಿಕೊಂಡಿಲ್ಲ ಮತ್ತು ನಾಗರಿಕರಿಗೆ ಯಾವುದೇ ಹಾನಿಯಾದ ವರದಿಗಳಿಲ್ಲ’ ಎಂದು ಭಾರತೀಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಉರಿ ಭಯೋತ್ಪಾದಕ ದಾಳಿಯ ನಂತರದ ‘ನಿರ್ದಿಷ್ಟ ದಾಳಿ’ ಮತ್ತು ಪುಲ್ವಾಮಾ ಹತ್ಯೆಯ ನಂತರದ ಬಾಲಾಕೋಟ್ ವಾಯುದಾಳಿಯು ಪಾಕ್ ಆಕ್ರಮಿತ ಪ್ರದೇಶಗಳಿಗೆ ‘ಸೀಮಿತ’ವಾಗಿದ್ದರೆ, ಈ ಬಾರಿ ಸಶಸ್ತ್ರ ಪಡೆಗಳು ಪಾಕಿಸ್ತಾನದಲ್ಲಿರುವ ಬಹಾವಲ್ಪುರ್ ಮತ್ತು ಮುರೀದ್ಕೆಯಂತಹ ಪ್ರಮುಖ ನೆಲೆಗಳ ಮೇಲೆ ದಾಳಿ ಮಾಡಿ ನೆರೆ ರಾಷ್ಟ್ರಕ್ಕೆ ಸ್ಪಷ್ಟ ಸಂದೇಶ ರವಾನಿಸಿವೆ. ಈ ದಾಳಿಯ ಬಳಿಕ, ಗಡಿಯಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ.

ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ ಘಟಕಗಳು ಎರಡು ಡಜನ್ ಕ್ಷಿಪಣಿಗಳು ಮತ್ತು ‘ಸ್ಮಾರ್ಟ್’ ಶಸ್ತ್ರಾಸ್ತ್ರ ಬಳಸಿ, ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ. ಒಳಗಿರುವ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡಿವೆ. ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಜೈಷ್–ಇ–ಮೊಹಮ್ಮದ್ ಸಂಘಟನೆಯ ಪ್ರಧಾನ ಕಚೇರಿಯನ್ನು ಹೊಡೆದುರುಳಿಸಿವೆ. ಭಾರತೀಯ ಸೇನೆಯು ಉಗ್ರರ ಏಳು ತಾಣಗಳನ್ನು ಚಿಂದಿ ಉಡಾಯಿಸಿದರೆ, ಬಹಾವಲ್ಪುರದಲ್ಲಿರುವ ಭಯೋತ್ಪಾದಕ ಶಿಬಿರ ಸೇರಿದಂತೆ ಉಳಿದ ಎರಡನ್ನು ಐಎಎಫ್ ತನ್ನ ದೀರ್ಘ ಗುರಿಯ ಶಸ್ತ್ರಾಸ್ತ್ರಗಳಿಂದ ಹೊಡೆದುರುಳಿಸಿತು ಎಂದು ಮೂಲಗಳು ತಿಳಿಸಿವೆ.

ಪಹಲ್ಗಾಮ್ ಹೇಯ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದರ ಜತೆಗೆ, ಪಾಕಿಸ್ತಾನ ಮತ್ತು ಅದರ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ನೆಲೆಗೊಂಡಿರುವ ಭಯೋತ್ಪಾದಕ ಸಂಘಟನೆಗಳು ದೇಶದಲ್ಲಿ ಇನ್ನಷ್ಟು ಇಂತಹ ದಾಳಿಗಳನ್ನು ಯೋಜಿಸುವ ಸಾಧ್ಯತೆಯ ಬಗ್ಗೆ ಗುಪ್ತಚರ ವರದಿಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ‘ಸಿಂಧೂರ’ ಕಾರ್ಯಾಚರಣೆಯನ್ನು ನಡೆಸಿದೆ.

‘ನಿಖರ ಗುರಿಯೊಂದಿಗೆ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಾಸ್ತ್ರ ಬಳಸಿಕೊಂಡು ನಾಗರಿಕರಿಗೆ ಯಾವುದೇ ಹಾನಿಯಾಗದಂತೆ ಕಾರ್ಯಾಚರಣೆ ಮುಗಿಸಲಾಗಿದೆ. ಒಂದು ನಿರ್ದಿಷ್ಟ ಕಟ್ಟಡ ಅಥವಾ ಕಟ್ಟಡಗಳ ಗುಂಪನ್ನು ಗುರಿಯಾಗಿಸಿಕೊಂಡೇ ದಾಳಿ ನಡೆಸಲಾಗಿದೆ’ ಎಂದು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಭಯೋತ್ಪಾದಕರ ದಾಳಿಯ ನಂತರ ಬಿಹಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ‘ಅಮಾಯಕರ ಹತ್ಯೆ ಮಾಡಿರುವ ಉಗ್ರರನ್ನು ಹುಡುಕಿ, ಹುಡುಕಿ ಶಿಕ್ಷಿಸಲಾಗುವುದು. ಅವರ ಕಲ್ಪನೆಗೂ ಮೀರಿದಂತಹ ಶಿಕ್ಷೆ ನೀಡಲಾಗುವುದು’ ಎಂದು ಶಪಥ ಮಾಡಿದ್ದರು. ಸೇನೆಯ ಹಿರಿಯ ಅಧಿಕಾರಿಗಳ ಜತೆಗೆ ಕಳೆದ ವಾರ ಉನ್ನತ ಮಟ್ಟದ ಸಭೆ ನಡೆಸಿದ್ದ ಮೋದಿ ಅವರು, ಪಾಕಿಸ್ತಾನ ಪ್ರೇರಿತ ಉಗ್ರರ ದಮನಕ್ಕೆ ದಾಳಿಯ ಮಾದರಿ, ಗುರಿ ಹಾಗೂ ಸಮಯ ನಿರ್ಧರಿಸಲು ಸಶಸ್ತ್ರ ಪಡೆಗಳಿಗೆ ಕಾರ್ಯಾಚರಣೆಯ ಪೂರ್ಣ ಸ್ವಾತಂತ್ರ್ಯ ಇದೆ’ ಎಂದು ಹೇಳಿದ್ದರು. ಅದಾದ ಒಂದು ವಾರದಲ್ಲೇ ಸೇನೆಯು ಪಾಕ್ನಲ್ಲಿರುವ ಉಗ್ರರ ನೆಲೆಗಳ ಮೇಲೆ ಪ್ರತೀಕಾರದ ದಾಳಿ ನಡೆಸಿದೆ.

‘ಇಪ್ಪತೈದು ಮುಗ್ಧ ಭಾರತೀಯರನ್ನು ಮತ್ತು ಒಬ್ಬ ನೇಪಾಳಿ ಪ್ರಜೆಯನ್ನು ಬರ್ಬರವಾಗಿ ಕೊಂದ ಕಾರಣಕ್ಕೆ ಈ ದಾಳಿ ನಡೆಸಲಾಗಿದೆ’ ಎಂದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ, ‘ನಮ್ಮ ಈ ನಡೆ ನಿರ್ದಿಷ್ಟ, ವಿವೇಚನಾಭರಿತವಾಗಿದೆ ಮತ್ತು ಉದ್ವಿಗ್ನತೆ ಹೆಚ್ಚಿಸುವ ಉದ್ದೇಶ ಹೊಂದಿಲ್ಲ’ ಎಂದು ಸ್ಪಷ್ಟಪಡಿಸಿದರು. ‘ಭಾರತವು ಈ ದಾಳಿಗಳನ್ನು ಪಾಕಿಸ್ತಾನದ ಸೇನಾ ನೆಲೆಗಳ ಮೇಲೆ ಮಾಡಿಲ್ಲ. ದಾಳಿಯ ನೆಲೆಗಳ ಆಯ್ಕೆ ಮತ್ತು ವಿಧಾನದಲ್ಲಿ ಸಂಯಮ ವಹಿಸಲಾಗಿದೆ’ ಎಂದು ಅವರು ತಿಳಿಸಿದರು.

ಉಗ್ರರ ವಿರುದ್ಧ ಪಾಕಿಸ್ತಾನ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದ ಕಾರಣ ಏಪ್ರಿಲ್ 22ರ ದುಷ್ಕೃತ್ಯದ ಅಪರಾಧಿಗಳನ್ನು ಶಿಕ್ಷಿಸಲು ಹಾಗೂ ಸಂತ್ರಸ್ತ ಕುಟುಂಬಗಳಿಗೆ ನ್ಯಾಯ ಒದಗಿಸಲು ಸರ್ಕಾರವು ದಾಳಿ ನಡೆಸಲು ನಿರ್ಧರಿಸಿತು ಎಂದು ಅವರು ಹೇಳಿದರು.

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳು, ಸಂಘಟಕರು, ಹಣಕಾಸು ಒದಗಿಸಿದವರು ಮತ್ತು ಪ್ರಾಯೋಜಕರನ್ನು ಹೊಣೆಗಾರರನ್ನಾಗಿ ಮಾಡುವ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಹೇಳಿಕೆಗೆ ಅನುಗುಣವಾಗಿ ಭಾರತದ ಕ್ರಮಗಳು ಇವೆ ಎಂದು ಮಿಸ್ರಿ ಸ್ಪಷ್ಟಪಡಿಸಿದರು.

ಪ್ರಧಾನಿ ನರೇಂದ್ರ ಮೋದಿ ‘ಸಿಂಧೂರ’ ಕಾರ್ಯಾಚರಣೆಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಿದರು ಎಂದು ಸೇನೆಯ ಮೂಲಗಳು ತಿಳಿಸಿವೆ. ಕಾರ್ಯಾಚರಣೆಯ ನಂತರ, ಅವರು ಕೇಂದ್ರ ಸಚಿವ ಸಂಪುಟದ ಸಭೆ ನಡೆಸಿದರು ಮತ್ತು ಯಶಸ್ವಿ ದಾಳಿಗಳಿಗಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದರು.

ಮೋದಿ ಅಧ್ಯಕ್ಷತೆಯಲ್ಲಿ ನಡೆದ ಭದ್ರತೆ ಕುರಿತ ಸಚಿವ ಸಂಪುಟ ಸಮಿತಿ ಸಭೆಯು ಸಶಸ್ತ್ರ ಪಡೆಗಳ ಪ್ರತೀಕಾರದ ದಾಳಿಯ ನಂತರದ ಪರಿಸ್ಥಿತಿಯನ್ನು ಪರಿಶೀಲಿಸಿತು.

* ಒಂಬತ್ತು ನೆಲೆಗಳ ಮೇಲೆ ಗುರಿ

* 25 ನಿಮಿಷದ ಕಾರ್ಯಾಚರಣೆ

* 70 ರಿಂದ 100 ಉಗ್ರರ ಹತ್ಯೆ

* ಜಾಗತಿಕ ಉಗ್ರ ಮಸೂದ್ ಅಜರ್ನ ಕುಟುಂಬ ಸದಸ್ಯರು–ಆಪ್ತರ ನಿರ್ನಾಮ

* ಗಡಿಯಿಂದ 100 ಕಿ.ಮೀ. ಒಳಗೆ ಪಾಕಿಸ್ತಾನದಲ್ಲಿ ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.